ನೀತಿ ಸಂಹಿತೆ ಉಲ್ಲಂಘನೆ 17.28 ಲೀ ಮದ್ಯ ವಶ

29fadf7d-e21b-49d5-88ce-cc662fdd84be
Published on

ಬಾಗಲಕೋಟೆ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಬಾದಾಮಿ ಮತಕ್ಷೇತ್ರ ವ್ಯಾಪ್ತಿಯ ಕುಳಗೇರಿ ರಸ್ತೆಯಲ್ಲಿ ದಾಳಿ ನಡೆಸಿದಾಗ 17.28 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆದುಕೊಂಡಿದೆ.

ದಾಳಿಯಲ್ಲಿ 9690 ಮಿಲಿಯ ವಿಸ್ಕಿ ಟೆಟ್ರಾಪ್ಯಾಕ್ ಮತ್ತು 481800 ಮಿಲಿ ಹೇವಡ್ಸ್ ವಿಸ್ಕಿ ಟೆಟ್ರಾಪ್ಯಾಕ್‍ಗಳನ್ನು ದ್ವಿಚಕ್ರ ವಾಹನದಲ್ಲಿ ಸಾಗಿಸುತ್ತಿದ್ದಾಗ ಜಪ್ತ ಮಾಡಿ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಮೌಲ್ಯ 1.07 ಲಕ್ಷ ರೂ.ಗಳದ್ದಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net