ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ತಾಲೂಕಿನ ಕೈವಾರ ಕ್ರಾಸ್‌ನಲ್ಲಿರುವ ಶ್ರೀ ಬೈರವೇಶ್ವರ ಪಿಯು ಕಾಲೇಜಿನ 10 ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಮೆಡಿಕಲ್ ಸೀಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಾಂಶುಪಾಲ ಗೋಪಿನಾಥ್ ಹೇಳಿದರು.
ಕಾಲೇಜಿನ ಆವರಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊಟ್ಟಮೊದಲ ಬಾರಿಗೆ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಸಿಇಟಿ, ಜೆಇಇ, ಕಾಮೆಡ್‌ಕೆ ಮತ್ತು ನೀಟ್ ಪರೀಕ್ಷೆ ಬರೆದಿದ್ದರು. ನೀಟ್ ಪರೀಕ್ಷೆ ಎದುರಿಸಿದ್ದ 10 ವಿದ್ಯಾರ್ಥಿಗಳು 500ಕ್ಕೂ ಹೆಚ್ಚು ಅಂಕ ಪಡೆದುಮೆಡಿಕಲ್ ಸೀಟ್ ಗಿಟ್ಟಿಸಿಕೊಂಡಿದ್ದಾರೆ. ಜೆಇಇ ಮೇನ್ಸ್ 4 ಮಂದಿ, ಜೆಇಇ ಅಡ್ವಾನ್ಸ್ ಮತ್ತು ಕಾಮೆಡ್‌ಕೆನಲ್ಲಿ ತಲಾ ಒಬ್ಬೊಬ್ಬರು ಉತ್ತಮ ಅಂಕ ಪಡೆದುಕೊಂಡಿದ್ದಾರೆ ಎಂದರು.
ದಸ್ತಗೀರ್-523, ಪಿ.ನಿಶಾ-506, ಎಂ.ನಾಗರತ್ನ-501, ಡಿ. ಪ್ರೀತಂ-479, ಡಿ. ದರ್ಶನ್-472, ಎಸ್.ಎಂ. ವಿಘ್ನೇಶ್-462, ಜಿ. ನಿತೀಶ್‌ಕುಮಾರ್-438, ಸಾಧಿಯ ಬಿ. ಅಬ್ದುಲ್ ರೆಹಮಾನ್-429, ಸೈಯದ್ ಕಾಶಿಫ್ ಅಪ್ಸರ್-423 ಮತ್ತು ಸೌಭಾಗ್ಯ ವೆಂಕಟೇಶ್ ಭಾಗ್ಯದ್-412 ಅಂಕ ಗಳಿಸಿದ್ದಾರೆ.
ಜೆಇಇ ಮೇನ್‌ನಲ್ಲಿ ಟಿ.ಆರ್.ವಿಜಯಕುಮಾರ್ ಶೇ.99.05, ಜಿ.ಯಶವಂತ ಶೇ. 98.05, ಪಿ. ನಿಶಾ ಶೇ.96.05, ಎ.ಜೆ. ವಿದ್ಯಾಸಾಗರ್ ಶೇ.95.07 ಪಡೆದುಕೊಂಡರೆ, ಜೆಇಇ ಅಡ್ವಾನ್ಸ್‌ನಲ್ಲಿ ಎಸ್.ಎಸ್.ಮಾಲತಿ 10,002ನೇ ರ‌್ಯಾಂಕ್ ಪಡೆದುಕೊಂಡರೆ ಕಾಮೆಡ್‌ಕೆನಲ್ಲಿ ಎಸ್.ಎಂ.ರಿತೇಶ್ 446ನೇ ರ‌್ಯಾಂಕ್ ಗಳಿಸಿದ್ದಾರೆ ಎಂದು ಸಂಸ್ಥೆ ಅಧ್ಯಕ್ಷ ಸುಬ್ಬಾರೆಡ್ಡಿ ತಿಳಿಸಿದರು. ಶ್ರೀ ಬೈರವೇಶ್ವರ ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರಾದ ಟಿ.ಮಂಜುನಾಥ್, ವೆಂಕಟರೆಡ್ಡಿ, ನಂಜುಂಡಗೌಡ, ರಾಜಣ್ಣ, ಶಾಂತಮ್ಮ, ಜೆಪಿ ಅಕಾಡೆಮಿಯ ಮುಖ್ಯಸ್ಥ ಗೋಪಿನಾಥ್, ಪ್ರೊಪರೈಟರ್ ಹರೀಶ್ ಇದ್ದರು.