

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಯುವತಿಯ ನಿಶ್ಚಿತಾರ್ಥ ಮುರಿಯಲು ಆಕೆಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಘಟನೆ ಕಲಬುರಗಿ ನಗರದಲ್ಲಿ ಬೆಳಕಿಗೆ. ಕೆಲವರ ಮೊಬೈಲ್‌ನಲ್ಲಿ ದೃಶ್ಯ ಹರಿದಾಡುತ್ತಿದೆ.
ಭರತ ನಗರ ತಾಂಡಾದ ವಿಕಾಸ ಉಪಾದ್ಯಾಯ ಎಂಬಾತನೇ ವಿಡಿಯೋ ಹರಿಬಿಟ್ಟ ವ್ಯಕ್ತಿ ಎಂದು ದೂರಲಾಗಿದೆ. ಈ ಕುರಿತು ಸೆನ್ ಠಾಣೆಗೆ ಯುವತಿ ಪೋಷಕರು ದೂರು ನೀಡಿ, ತಮ್ಮ ಮಗಳ ನಿಶ್ಚಿತಾರ್ಥವಾಗಿದ್ದು ಅದನ್ನು ಮುರಿದು ಹಾಕಲು ಹೀಗೆ ಮಾಡಿದ್ದಾರೆ ಎಂದು ಆರೋಪಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.