ನಿವೇಶನಕ್ಕೆ ಅರಣ್ಯ ಸಮಸ್ಯೆ ಬಗೆಹರಿಸಿ

congres
ನಿವೇಶನಕ್ಕೆ ಅರಣ್ಯ ಸಮಸ್ಯೆ ಬಗೆಹರಿಸುವಂತೆ ಕಳಸ ಕಾಂಗ್ರೆಸ್ ಮುಖಂಡರು ಕೊಪ್ಪ ಡಿಎ್ಒ ನಂದೀಶ್ ಅವರಿಗೆ ಮನವಿ ಮಾಡಿದರು. ಕೆ.ಆರ್.ಪ್ರಭಾಕರ್, ಕೆ.ಎ.ಶ್ರೇಣಿಕ, ವಿಶ್ವನಾಥ್ ಇದ್ದರು.
Published on

ಕಳಸ: ತಾಲೂಕಿನ ನಿವೇಶನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು ಕೊಪ್ಪ ಉಪ ಅರಣ್ಯ ಸಂರಕ್ಷಣಾಧಿಕಾರಿ ನಂದೀಶ್ ಅವರಿಗೆ ಮನವಿ ಮಾಡಿದರು.

ಸೋಮವಾರ ಅವರ ಕಚೇರಿಗೆ ಕೆಪಿಸಿಸಿ ಸದಸ್ಯ ಕೆ.ಆರ್.ಪ್ರಭಾಕರ್, ಕಳಸ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಶ್ರೇಣಿಕ, ಕಾರ್ಯದರ್ಶಿ ವಿಶ್ವನಾಥ್ ಭೇಟಿ ನೀಡಿದರು.
ಕಳಸ, ಸಂಸೆ, ಹೊರನಾಡು, ಮರಸಣಿಗೆ, ಇಡಕಿಣಿ ಮತ್ತು ತೋಟದೂರು ಗ್ರಾಮ ಪಂಚಾಯಿತಿಗಳಲ್ಲಿ ನೂರಾರು ವಸತಿರಹಿತರು ಇದ್ದಾರೆ. ಆದರೆ ಅವರಿಗೆ ನಿವೇಶನ ಒದಗಿಸಲು ಇರುವ ಎಲ್ಲ ಕಂದಾಯ ಭೂಮಿಯೂ ಸಾಮಾಜಿಕ ಅರಣ್ಯದ ಅಕೇಶಿಯಾ ನೆಡುತೋಪು ಆಗಿದೆ. ಈ ನೆಡುತೋಪುಗಳಲ್ಲೇ ಅರ್ಹ ಲಾನುಭವಿಗಳಿಗೆ ನಿವೇಶನ ನೀಡಲು ಅರಣ್ಯ ಇಲಾಖೆ ಸಹಕಾರ ನೀಡಬೇಕು ಎಂದು ಕೆ.ಆರ್.ಪ್ರಭಾಕರ್ ಮನವಿ ಮಾಡಿದರು.
ತಾಲೂಕಿನ ಹಲವೆಡೆ ರಸ್ತೆ, ಮನೆ ಹಾಗೂ ವಿದ್ಯುತ್ ಕಂಬಗಳ ಮೇಲೆ ಬೀಳಬಹುದಾದ ಮರಗಳ ತೆರವಿಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ಶ್ರೇಣಿಕ ಹಾಗೂ ವಿಶ್ವನಾಥ್ ಡಿಎಫ್‌ಒಗೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net