ನಿವೃತ್ತಿಯಾಗಿ ಬಂದ ಯೋಧನಿಗೆ ಸಿಕ್ಕಿತು ಅದ್ದೂರಿ ಸ್ವಾಗತ

IMG-20220904-WA0018.jpg
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಭಾರತೀಯ ಗಡಿ ಭದ್ರತಾ ಪಡೆಯಲ್ಲಿ 25 ವರ್ಷ ಸೇವೆ ಸಲ್ಲಿಸಿ, ಕಾರ್ಗಿಲ್ ಯುದ್ಧದಲ್ಲೂ ಭಾಗವಹಿಸಿ ನಿವೃತ್ತರಾಗಿ ಸ್ವಗ್ರಾಮ ಕಡವಾಡಕ್ಕೆ ಮರಳಿದ ಯೋಧ ಬಾಲಕೃಷ್ಣ ಭೋವಿ ಅವರನ್ನು ಗ್ರಾಮಸ್ಥರು ಭಾನುವಾರ ಅದ್ದೂರಿಯಾಗಿ ಸ್ವಾಗತಿಸಿದರು.
ಬಿಎಸ್‌ಎಫ್ -67 ಬೆಟಾಲಿಯನ್‌ನಲ್ಲಿ ಇಂದೂರು, ಉದ್ದಮಪುರ, ಜಮ್ಮು, ಪಶ್ಚಿಮ ಬಂಗಾಳ, ಶಿಲ್ಲಾಂಗ್, ಮೇಘಾಲಯ, ಗುಜರಾತ್ ಅಮೃತಸರ, ಜಾರ್ಖಂಡ್, ಗೌಹಾಟಿ, ಅಸ್ಸಾಂ ಛತ್ತೀಸ್‌ಗಢ ಮುಂತಾದೆಡೆ ಸೇವೆ ಸಲ್ಲಿಸಿದ್ದರು. ಕಾರ್ಗಿಲ್ ಯುದ್ಧದಲ್ಲಿಯೂ ಪಾಲ್ಗೊಂಡಿದ್ದರು. ಭಾನುವಾರ ಕಾರವಾರ ರೈಲ್ವೆ ನಿಲ್ದಾಣಕ್ಕೆ ಬಂದಿಳಿದ ಅವರನ್ನು ತೆರೆದ ಜೀಪ್‌ನಲ್ಲಿ ಮೆರವಣಿಗೆಯಲ್ಲಿ ಗ್ರಾಮಕ್ಕೆ ಕರೆದೊಯ್ಯಲಾಯಿತು. ಸ್ಥಳೀಯ ಗಜಾನನ ಯುವಕ ಮಂಡಳಿ, ಭೋವಿ ಸಮಾಜದ ಸಂಘಟನೆಗಳಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇವರ ಜತೆಗೆ ನಿವೃತ್ತಿಯಾಗಿ ಆಗಮಿಸಿದ ಸಮೀಪದ ಗ್ರಾಮಗಳ ಯೋಧರಾದ ಬಾಲಕೃಷ್ಣ ನಾಯ್ಕ ಕುಮಟಾ, ವೆಂಕಟೇಶ ನಾಯ್ಕ ಕುಮಟಾ, ಮಹೇಶ ನಾಯ್ಕ ಕುಮಟಾ, ಸುಧಾಕರ ನಾಯ್ಕ ಅಮದಳ್ಳಿ, ಕಾರವಾಡ ಕೋಡಿಬಾಗದ ವಿನಾಯಕ ಮೇತ್ರಿ, ಧಾರವಾಡ ಜಿಲ್ಲೆ ಕುಂದಗೋಳದ ಹೇಮಣ್ಣ ಗೌಡ ಮರಿಗೌಡರ್ ಅವರಿಗೂ ಹಾರ ಹಾಕಿ ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net