ನಿವೃತ್ತ ಶಿಕ್ಷಕ ಜಾನಮಟ್ಟಿಗೆ ಬೀಳ್ಗೊಡುಗೆ

bkt-30-13
ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ ೪೩ರ ಸರ್ಕಾರಿ ಪ್ರೌಢಶಾಲೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕ ಬಿ.ಎಂ.ಜಾನಮಟ್ಟಿ ದಂಪತಿಯನ್ನು ಸೋಮವಾರ ಶಾಲೆಯ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿನಿಯರು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಟ್ಟರು.
Published on

ಬಾಗಲಕೋಟೆ: ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸೋಮವಾರ ವೃತ್ತಿಯಿಂದ ನಿವೃತ್ತಿ ಹೊಂದಿದ ಶಿಕ್ಷಕ ಬಿ.ಎಂ.ಜಾನಮಟ್ಟಿ ಅವರನ್ನು ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಆತ್ಮೀಯರು ಸೇರಿಕೊಂಡು ಬೀಳ್ಕೊಡುಗೆ ಸಮಾರಂಭ ನಡೆಸಿದರು.

ಬಾಗಲಕೋಟೆ ನವನಗರದ ಸೆಕ್ಟರ್ ನಂಬರ್ ೪೩ರ ಸರ್ಕಾರ ಪ್ರೌಢಶಾಲೆಯಲ್ಲಿ ನಿವೃತ್ತಿ ಹೊಂದಿದ ಜಾನಮಟ್ಟಿ ಅವರು ಬಾಲ್ಯದಿಂದ ನಡೆದು ಬಂದ ದಾರಿಯನ್ನು ಆತ್ಮೀಯರು ಮೆಲಕು ಹಾಕಿದ, ಜಾನಮಟ್ಟಿ ಶಿಕ್ಷಕ ದಂಪತಿಯನ್ನು ಸನ್ಮಾನಿಸಿದರು. ಈ ವೇಳೆ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕರಿಗೆ ಹೂಮಳೆಗೈದು ಬೀಳ್ಕೊಟ್ಟರು.

ಈ ವೇಳೆ ಮಾತನಾಡಿದ ಶಿಕ್ಷಕ ಜಾನಮಟ್ಟಿ ಅವರು, ಇನ್ನೊಬ್ಬರಿಗೆ ಸಹಾಯ ಮಾಡುವುದರಲ್ಲಿ ಜೀವನದಲ್ಲಿ ತೃಪ್ತಿ ಕಾಣಬೇಕು ಎಂದ ಅವರು, ಇದೇ ವೇಳೆ ಹತ್ತು ಮಕ್ಕಳನ್ನು ದತ್ತು ಪಡೆದುಕೊಂಡು ಅವರ ಶೈಕ್ಷಣಿಕ ವೆಚ್ಚಭರಿಸುವುದಾಗಿ ಹಾಗೂ ಶಾಲೆಯ ಮಕ್ಕಳ ಪಾಠೋಪಕರಣಕ್ಕೆ ೫ ಸಾವಿರ ರೂ.ಗಳು ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ೬ ವಿಷಯಗಳಲ್ಲಿ ಅತಿ ಹೆಚ್ಚು ಪಡೆಯುವ ವಿದ್ಯಾರ್ಥಿಗಳು ತಲಾ ೫೦೧ ರೂ. ಬಹುಮಾನ ಕೊಡುವುದಾಗಿ ಘೋಷಿಸಿದರು.

ಚಿಕ್ಕಾಲಗುಂಡಿ ಮಲ್ಲಿಕಾರ್ಜುನ ಮಠದ ಶಿವಶರಣಾನಂದ ಸ್ವಾಮೀಜಿ, ಶಿರಕೋಳ ಹಿರೇಮಠದ ಗುರುಸಿದ್ದೇಶ್ವರ ಸ್ವಾಮೀಜಿ, ಬಿವಿವಿ ಸಂಘದ ನಿರ್ದೇಶಕ ರವಿಸಂಜಯ ಸಾವಳಗಿಮಠ, ಮುಖ್ಯಶಿಕ್ಷಕಿ ಆರ್.ಎಂ.ಕಿಲ್ಲೇದಾರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net