ನಿರ್ದಿಷ್ಟ ಗುರಿಯಿದ್ದರೆ ಸಾಧನೆ ಸಾಧ್ಯ

HUN-JULY-1-3(HK HALLI HS SCHOOL HONOURING)
filter: 0; fileterIntensity: 0.000000; filterMask: 0; captureOrientation: 0; hdrForward: 0; shaking: 0.030256; highlight: 1; algolist: 0; multi-frame: 1; brp_mask: 8; brp_del_th: 0.0046,0.0000; brp_del_sen: 0.1000,0.0000; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: 0;weatherinfo: null;temperature: 38;
Published on

ಹುಣಸೂರು: ತಾಲೂಕಿನ ಗಾವಡೆಗೆರೆ ಹೋಬಳಿ ಹಿರೀಕ್ಯಾತನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕಳೆದ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕೊಟಕ್ ಮಹೇಂದ್ರ ಬ್ಯಾಂಕ್ ವತಿಯಿಂದ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮಂಗಳವಾರ ಶಾಲೆಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಬ್ಯಾಂಕ್‌ನ ಉಪ ವ್ಯವಸ್ಥಾಪಕ ನಿರಂಜನ್ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ನಿರ್ದಿಷ್ಟ ಗುರಿಯೊಂದಿಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದಲ್ಲಿ ಸಾಧನೆಯ ಶಿಖರವೇರಲು ಸಾಧ್ಯ. ಕ್ರೀಡೆಯಲ್ಲಿ ಒಲವು ಹೊಂದಿರುವ ವಿದ್ಯಾರ್ಥಿ ಓದಿನೊಂದಿಗೆ ಕ್ರೀಡೆಯಲ್ಲಿ ಗಮನ ನೀಡುವುದು ಅಗತ್ಯ. ಯಾವುದೇ ವಿಷಯದಲ್ಲಿ ಆಸಕ್ತಿ ಹೊಂದಿದಲ್ಲಿ ಅದರ ಕುರಿತು ಹೆಚ್ಚಿನ ಗಮನ ನೀಡಿರಿ. ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಶಾಲೆಯ ಎಲ್ಲ ವಿದ್ಯಾರ್ಥಿಗಳೂ ಉತ್ತಮ ಅಂಕಗಳೊಂದಿಗೆ ಬ್ಯಾಂಕ್ ನೀಡುವ ಸನ್ಮಾನವನ್ನು ಸ್ವೀಕರಿಸುವಂತಾಗಬೇಕು ಎಂದು ಹೇಳಿದರು.

ಮುಖ್ಯ ಶಿಕ್ಷಕಿ ಸರಳಾ ಮಾತನಾಡಿ, ವಿದ್ಯಾರ್ಥಿಗಳು ಶಾಲೆಗೆ, ಪಾಲಕರಿಗೆ ಗೌರವ ತರುವಂತ ಮನಸ್ಥಿತಿ ಬರಬೇಕು. ಊರಿನ ಗೌರವವನ್ನು ಹೆಚ್ಚಿಸುವಂತಹ ಪ್ರಯತ್ನ ಮಾಡಬೇಕು ಎಂದರು.

2024-25ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಮೀನಾಕ್ಷಿ, ಲಕ್ಷ್ಮೀ, ಕೀರ್ತನಾ ಗೌಡರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಪುಟ್ಟರಾಜು, ನಿಕಟಪೂರ್ವ ಅಧ್ಯಕ್ಷ ಹರೀಶ್ ಕೃಷ್ಣೇಗೌಡ, ನಿರ್ದೇಶಕರಾದ ಜಯಣ್ಣ, ಸಂಪತ್ತು, ಅಶೋಕ, ಮಹದೇವೇಗೌಡ, ಮಹಾಲಿಂಗ, ಶಿಕ್ಷಕರಾದ ಜೂಲಿಯೆಟ್ ಡೈನಾ ಟೆಲಿಸ್, ಮಹೇಶ್, ಅಯ್ಯಪ್ಪ, ಚಿಕ್ಕಣ್ಣ, ಶಿಲ್ಪಾ, ಮಮತಾ, ಬೀರ ನಾಯಕ, ಭಾರತೀ ಲಟ್ಟಿ, ಸುನೀಲ್, ಟೆಕ್ಕಿಸುಷ್ಮಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net