ನಿರುದ್ಯೋಗಕ್ಕೆ ಉದ್ಯಮಶೀಲತೆ ಮದ್ದು

bkt-11-3
ಬಾಗಲಕೋಟೆ ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉದ್ಯಮಶೀಲತೆ ಮತ್ತು ಅಭಿವೃದ್ಧಿ ಕುರಿತು ಕಾರ್ಯಾಗಾರದಲ್ಲಿ ಡಾ.ಪ್ರಕಾಶ ವಡವಡಗಿ ಮಾತನಾಡಿದರು.
Published on

ಬಾಗಲಕೋಟೆ: ವಿದ್ಯಾರ್ಥಿಗಳು ತಮ್ಮ ಪದವಿ ವ್ಯಾಸಂಗದ ಜೊತೆಗೆ ಉದ್ಯಮಶೀಲತೆ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ನಿರುದ್ಯೋಗ ನಿವಾರಣೆಗೆ ಉದ್ಯಮಶೀಲತೆ ಮದ್ದು ಎಂದು ಡಾ.ಪ್ರಕಾಶ ವಡವಡಗಿ ಹೇಳಿದರು.

ನವನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ವಾಣಿಜ್ಯ ವಿಭಾಗದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಉದ್ಯಮಶೀಲತೆ ಮತ್ತು ಅಭಿವೃದ್ಧಿ ಕುರಿತು ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಇದು ಸ್ಪರ್ಧಾತ್ಮಕ ಯುಗವಾಗಿದ್ದರಿಂದ ವಿಜ್ಞಾನ, ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರಗಳಿಂದ ಯಂತ್ರಗಳು ಸೃಷ್ಠಿಯಾಗುತ್ತಿವೆ. ಇವುಗಳ ಸದುಪಯೋಗ ಮಾಡಿಕೊಂಡು ಉದ್ಯಮಶೀಲ ಕೌಶಲಗಳನ್ನು ಅಳವಡಿಸಿಕೊಂಡರೆ ನಿರುದ್ಯೋಗ ನಿವಾರಣೆ ಆಗಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ ಮಾತನಾಡಿ, ವಿದ್ಯಾರ್ಥಿಗಳು ಉದ್ಯಮಶೀಲರಾಗಬೇಕಾದರೆ ಕೈಗಾರಿಕಾ ರಂಗದಲ್ಲಿರುವ ಅವಕಾಶಗಳನ್ನು ಬಳಸಿಕೊಳ್ಳುವದರ ಮೂಲಕ ಸರ್ಕಾರದ ಪ್ರೇರಣಾ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಡಾ.ಅರುಣಕುಮಾರ ಗಾಳಿ ಮಾತನಾಡಿ, ಡಿಜಿಟಲ್ ಭಾರತದಲ್ಲಿ ಇಂದು ತಾಂತ್ರಿಕ ಕ್ಷೇತ್ರಗಳ ಬದಲಾವಣೆಗಳನ್ನು ಅರಿತುಕೊಳ್ಳಬೇಕು. ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳು ತಮ್ಮ ಮುಂದಿನ ಭವಿಷ್ಯದ ಉತ್ತಮ ಬದುಕನ್ನು ಉದ್ಯಮಶೀಲರಾಗುವ ಮೂಲಕ ಕಟ್ಟಿಕೊಳ್ಳಬೇಕು ಎಂದು ಹೇಳಿದರು.

ಐಕ್ಯೂಎಸಿ ಸಂಚಾಲಕ ಡಾ.ಪ್ರಭುದೇವ ಮಂಡಿ, ಸಹ ಸಂಚಾಲಕ ಡಾ.ಮೂಬೀನ್ ಬೆಳಗಾಮ್, ನಾಗರಾಜ ವಡ್ಡರ ಉಪಸ್ಥಿತರಿದ್ದರು. ಎಚ್.ಬಿ.ಬೋವಿ ಸ್ವಾಗತಿಸಿದರು. ಸುನೀಲ ಮಠಪತಿ ನಿರೂಪಿಸಿದರು. ಸುಮಂಗಲಾ ಇಳಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net