

ಬಾಗಲಕೋಟೆ: ಸತತ ೩ನೇ ಬಾರಿ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪ್ರಸ್ತುತ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬಹಳಷ್ಟು ನಿರೀಕ್ಷೆಗಳಿದ್ದವು. ಅದರಲ್ಲೂ ಉತ್ತರಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ ಅನುದಾನ ಕೊಡುತ್ತಾರೆ ಎಂಬ ನಿರೀಕ್ಷೆ ಹುಸಿಯಾಗಿದೆ. ರಾಜ್ಯದಿಂದ ೧೯ ಜನ ಸಂಸದರನ್ನು ಆಯ್ಕೆ ಮಾಡಿದರೂ, ಕರ್ನಾಟಕಕ್ಕೆ ವಿಶೇಷ ಯೋಜನೆಗಳೇನೂ ಕೊಟ್ಟಿಲ್ಲ. ಬಿಹಾರ್, ಆಂಧ್ರಪ್ರದೇಶಕ್ಕೆ ಸಿಂಹಪಾಲು ಕೊಡುವ ಮೂಲಕ, ಇದು ಆಂಧ್ರ-ಬಿಹಾರ್ ಬಜೆಟ್ ಆದಂತಿದೆ ಎಂದು ಚರಂತಿಮಠ ಆಂಡ್ ವಸ್ತ್ರದ ಫೌಂಡೇಶನ್ ಅಧ್ಯಕ್ಷ ಮಲ್ಲಿಕಾರ್ಜುನ ಚರಂತಿಮಠ ತಿಳಿಸಿದ್ದಾರೆ.