

ಬಾಗಲಕೋಟೆ: ಇಲ್ಲಿನ ಪ್ರತಿಷ್ಠಿತ ತೇಜಸ ಇಂಟರನ್ಯಾಷನಲ್ ಎಜುಕೇಶನಲ್ ಇನಸ್ಟಿಟ್ಯೂಶನ ಆವರಣದಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಅತ್ಯಾಧುನಿಕ ಹವಾನಿಯಂತ್ರಿತ ಸಾವಿರ ಹಾಸಿಗೆಗಳ ವಿದ್ಯಾರ್ಥಿ ನಿಲಯಕ್ಕೆ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಗುರುವಾರ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಸಚಿವ ವಿ.ಸೋಮಣ್ಣ ಮಾತನಾಡಿ, ರೈತನ ಮಗನಾದ ಮುರುಗೇಶ ನಿರಾಣಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಸಕ್ಕರೆ ಉದ್ಯಮ ಆರಂಭಿಸಿ ರೈತರಿಗೆ ನೆರವಾದರು. ಸಾವಿರಾರು ಜನರಿಗೆ ಉದ್ಯೋಗ ಕಲ್ಪಿಸಿದರು. ರಾಷ್ಟç ವ್ಯಾಪಿ ತಮ್ಮ ಉದ್ಯಮ ವಿಸ್ತರಣೆ ಮಾಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೂ ಮಹತ್ತರ ಕೊಡುಗೆ ನೀಡಲು ಆರಂಭಿಸಿದ್ದಾರೆ. ಪ್ರಥಮ ಹಂತದಲ್ಲಿ ತೇಜಸ ಅಂತರ ರಾಷ್ಟಿçಯ ಶಿಕ್ಷಣ ಸಂಸ್ಥೆಯು ೨೦೧೭ ರಲ್ಲಿ ಆರಂಭಿಸಿದರು. ಸಿ.ಬಿ.ಎಸ್.ಇ ಹಾಗೂ ಪಿ.ಯು.ಸಿ ಕಾಲೇಜಿನಲ್ಲಿ ಪ್ರಾರಂಭವಾಗಿದೆ. ಆಯುರ್ವೇದಿಕ ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಸೇರಿದಂತೆ ವಿವಿಧ ನೂತನ ಕಾಲೇಜು ಆರಂಭಿಸಿರುವುದು ಶ್ಲಾಘನೀಯ, ಮುರುಗೇಶ ನಿರಾಣಿ ದೂರದೃಷ್ಠಿ ನಾಯಕ ಎಂದು ಬಣ್ಣಿಸಿದರು.
ಸಂಸ್ಥೆಯ ಅಧ್ಯಕ್ಷೆ ಮಾಧುರಿ ಮುಧೋಳ, ಸಂಸದರಾದ ಪಿ.ಸಿ.ಗದ್ದಿಗೌಡರ, ಗೋವಿಂದ ಕಾರಜೋಳ, ವಿ.ಪ ಸದಸ್ಯರಾದ ಪಿ.ಎಚ್.ಪೂಜಾರ, ಹನುಮಂತ ನಿರಾಣಿ, ತೇಜಸ ಅಂತರಾಷ್ಟಿçಯ ಶಾಲೆಯ ಪ್ರಾಚಾರ್ಯ ಸಚಿನ ಬಾತ್ರಾ, ತೇಜಸ ಪಿಯು ಕಾಲೇಜಿನ ಪ್ರಾಚಾರ್ಯರಾದ ವಿಕ್ರಾಂತ ಉಪಾಸೆ, ಎಂ.ಆರ್.ಎನ್ ಆಯುರ್ವೇದಿಕ್ ಕಾಲೇಜಿನ ಪ್ರಾಚಾರ್ಯ ಡಾ.ಪ್ರಹ್ಲಾದ ಗಂಗಾವತಿ, ಎಂ.ಆರ್.ಎನ್ ಗ್ರೂಪ್ ಆ-ï ಮೆಡಿಕಲ್ ಸಂಸ್ಥೆಯ ಆಡಳಿತಾಽಕಾರಿ ಡಾ.ಶಿವಕುಮಾರ ಗಂಗಲ್ ಇತರರರು.