ನಿರಂತರ ಮಳೆಯಿಂದ ವಿದ್ಯುತ್ ವ್ಯತ್ಯಯ

26 vpt 5
Published on

ವಿರಾಜಪೇಟೆ: ಕೆಲವು ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಹಲವಾರು ಮರಗಳು ನೆಲಕ್ಕುರುಳಿವೆ.

ಮರಗಳು ವಿದ್ಯುತ್ ಲೈನ್ ಮೇಲೆ ಬಿದ್ದಿರುವ ಪರಿಣಾಮವಾಗಿ ವಿರಾಜಪೇಟೆಯ ಗ್ರಾಮೀಣ ಪ್ರದೇಶಗಳಾದ ಬೊಳ್ಳರಿ ಮಾಡು, ಕೊಟ್ಟೋಳಿ, ಬೇಟೋಳಿ, ಹೆಗ್ಗಳ, ತೋರ, ಪೆರುಂಬಾಡಿ, ಪಾಲಂಗಾಲ, ಕೆದಮುಳ್ಳೂರು, ಬೂದಿಮಾಳ ಆರ್ಜಿ, ಚಿಟ್ಟಡೇ, ಅಂಬಟ್ಟಿ ಮುಂತಾದ ಪ್ರದೇಶಗಳಲ್ಲಿ ನಾಲ್ಕು ದಿನಗಳಿಂದ ನಿರಂತರವಾಗಿ ವಿದ್ಯುತ್ ವ್ಯತ್ಯಯವಾಗಿದ್ದು, ಜನರು ನಾಲ್ಕು ದಿನಗಳಿಂದ ಕತ್ತಲಲ್ಲಿ ದಿನ ದೂಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ನದಿ ತೀರದ ಪ್ರದೇಶಗಳಲ್ಲಿ ಕೃಷಿಭೂಮಿ ಮುಳುಗಡೆಯಾಗಿದ್ದು ಗದ್ದೆಗಳಿಗೆ ಹಾಕಿದ ಸಗಣಿ ಗೊಬ್ಬರ ಕೊಚ್ಚಿಕೊಂಡು ನದಿಯನ್ನು ಸೇರುತ್ತಿದೆ. ನಿರಂತರ ಮಳೆಯಿಂದಾಗಿ ಗ್ರಾಮೀಣ ಭಾಗದ ಸಣ್ಣ ಪುಟ್ಟ ತೋಡುಗಳು, ಕೆರೆ, ನದಿ ತುಂಬಿ ಹರಿಯುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net