

ಕಿಕ್ಕೇರಿ: ಕಳೆದ ಮೂರು ನಾಲ್ಕು ದಿನದಿಂದ ಸುರಿದ ಮಳೆಗೆ ಮಾಕವಳ್ಳಿಯಲ್ಲಿ ರೈತರೊಬ್ಬರ ಜಮೀನಿನಲ್ಲಿ ಬೆಳೆದಿದ್ದ ಹೂಕೋಸು ನಾಶವಾಗಿದೆ.
ರೈತ ಕುಮಾರಸ್ವಾಮಿ ಒಂದು ಎಕರೆ ಜಮೀನಿನಲ್ಲಿ ಹೂ ಕೋಸು ಬೆಳೆದಿದ್ದರು. ನಿರಂತರವಾಗಿ ಸುರಿದ ಮಳೆಯಿಂದ ಜಮೀನಿನಲ್ಲಿ ನೀರು ನಿಂತು ಬೆಳೆ ಕೊಳೆತು ಹಾಳಾಗಿದೆ. 1ಲಕ್ಷ ರೂ.ಗಳಿಗೂ ಅಧಿಕವಾಗಿ ಖರ್ಚು ಮಾಡಿ ಬೆಳೆದಿದ್ದರು. ಬೆಳೆ ನಷ್ಟದಿಂದ ಕಂಗಾಲಾಗಿರುವ ರೈತ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.