ನಿಯೋನ್ ಎಫ್.ಸಿ. ಅಮ್ಮತ್ತಿ ತಂಡಕ್ಕೆ ಚಾಂಪಿಯನ್ ಪಟ್ಟ

ಚಿತ್ರ 19ಎಸ್ ಡಿ ಪಿ 07
Published on

ಸಿದ್ದಾಪುರ: ವಿರಾಜಪೇಟೆ ತಾಲೂಕು ಮೈದಾನದಲ್ಲಿ ಭಾನುವಾರ ರಾತ್ರಿ ನಡೆದ ಕಲ್ಲುಬಾಯ್ಸ ಕಲ್ಲುಬಾಣೆ ಲೈಕ್ಸ್ ಫ್ಯಾಶನ್ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ನಿಯೋನ್ ಎಫ್.ಸಿ. ಅಮ್ಮತ್ತಿ ತಂಡವು ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸುವುದರ ಮೂಲಕ ಅತ್ಯಾಕರ್ಷಕ ಟ್ರೋಫಿಯೊಂದಿಗೆ 1 ಲಕ್ಷದ 25 ಸಾವಿರ ರೂ. ನಗದು ತಮ್ಮದಾಗಿಸಿಕೊಂಡಿದೆ.

ಜಿದ್ದಾಜಿದ್ದಿನಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ನಿಯೋನ್ ಎಫ್.ಸಿ. ಅಮ್ಮತ್ತಿ ತಂಡವು ಕೊಡಗಿನ ಬಲಿಷ್ಠ ತಂಡವಾದ ಮಿಡ್ ಸಿಟಿ ಸುಂಟ್ಟಿಕೊಪ್ಪ ತಂಡವನ್ನು ಎದುರಿಸಿತು. ಎರಡು ತಂಡವು ಫೈನಲ್ ಪಂದ್ಯದಲ್ಲಿ 1-1 ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿದ್ದವು. ಅಂತಿಮವಾಗಿ ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲುಗಳ ಅಂತರದಿಂದ ನಿಯೋನ್ ಎಫ್.ಸಿ ಅಮತ್ತಿ ತಂಡ ಗೆಲುವು ಸಾಧಿಸಿತು.

ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ನಿಯೋನ್ ಎಫ್.ಸಿ. ಅಮ್ಮತ್ತಿ ಹಾಗೂ ಟ್ರೆಡೀಶನಲ್ ಟೂರಿಸಂ ತಂಡಗಳ ನಡುವೆ ಸೆಣಸಾಟ ನಡೆಯಿತು. ಎರಡು ತಂಡಗಳು ಯಾವುದೇ ಗೋಲು ಗಳಿಸದೆ ಸಮಬಲ ಸಾಧಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ ಕೂಡ ಎರಡು ತಂಡಗಳು 5-5 ಗೋಲುಗಳನ್ನು ಬಾರಿಸಿ ಸಮಬಲ ಸಾಧಿಸಿದ್ದವು. ಅಂತಿಮವಾಗಿ ಟಾಸ್ ಮೂಲಕ ವಿಜೇತ ತಂಡವನ್ನು ಆಯ್ಕೆ ಮಾಡಲಾಯಿತು. ಟಾಸ್ ಅದೃಷ್ಟ ಪರೀಕ್ಷೆಯಲ್ಲಿ ನಿಯೋನ್ ಎಫ್.ಸಿ. ಅಮ್ಮತ್ತಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯವು ಮಿಡ್ ಸಿಟಿ ಸುಂಟಿಕೊಪ್ಪ ಹಾಗೂ ಅಮಿಗೋಸ್ ಕಲ್ಲುಬಾಣೆ ತಂಡಗಳ ನಡುವೆ ನಡೆಯಿತು. ನಿಗದಿತ ಸಮಯದಲ್ಲಿ ಎರಡು ತಂಡಗಳು 1-1 ಗೋಲು ಬಾರಿಸಿ ಸಮಬಲ ಸಾಧಿಸಿದ್ದವು. ಪೆನಾಲ್ಟಿ ಶೂಟೌಟ್‌ನಲ್ಲಿ ಮಿಡ್ ಸಿಟಿ ತಂಡವು 7-6 ಗೋಲುಗಳ ಅಂತರದಿಂದ ಗೆದ್ದು ಫೈನಲ್ ಪ್ರವೇಶಿಸಿತು. ಸೆಮಿಫೈನಲ್ ಪಂದ್ಯದಲ್ಲಿ ಮಿಡ್ ಸಿಟಿ ತಂಡದ ಗೋಲ್ ಕೀಪರ್ ಕೆವಿನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದುಕೊಂಡರು. ಕಲ್ಲು ಬಾಯ್ಸ ಫ್ಯಾಶನ್ ಕಪ್ ಎರಡನೇ ಆವೃತ್ತಿಯ ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ನಿಯೋನ್ ಎಫ್‌ಸಿ ಅಮ್ಮತ್ತಿ ಮುಡಿಗೇರಿಸಿಕೊಂಡಿತು. ಗೋಲ್ ಕೀಪರ್ ಶಾಹುಲ್ ಪಡೆದುಕೊಂಡರು. ಅತ್ಯುತ್ತಮ ಗೋಲ್ ಕೀಪರ್ ಮಿಡ್ ಸಿಟಿ ತಂಡದ ಕೆವಿನ್, ಅತ್ಯುತ್ತಮ ಡಿಫೆಂಡರ್ ನಿಯೋನ್ ಎಫ್.ಸಿ ತಂಡದ ಮಣಿ, ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಮಣಿ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net