ನಿಧಿಯಾಸೆಗೆ ಕಾಡಿನಲ್ಲಿ ಬಾವಿ ತೋಡಿದವರು ಜೈಲು ಪಾಲಾದರು

25KWR7
Published on

ವಿಜಯವಾಣಿ ಸುದ್ದಿಜಾಲ ಕಾರವಾರ
ಸಂರಕ್ಷಿತ ಅರಣ್ಯದಲ್ಲಿ ತೆರಳಿ ನಿಧಿ ಶೋಧಕ್ಕಾಗಿ ಪೂಜೆ ಮಾಡಿ ಬಾವಿ ತೋಡಿದ ನಾಲ್ವರನ್ನು ಅರಣ್ಯಾಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
ಶಿರವಾಡದ ಹಿದಾಯತ್ ಅಬ್ದುಲ್ ಗಣಿ ರಾಣಿಬೆನ್ನೂರು, ರುಸ್ತುಂ ರಜಾಕ್‌ಸಾಬ್ ಪಠಾಣ, ಹರ್ಷದ್‌ಅಲಿ, ಹೈದರಲಿ ಅನ್ಸಾರ್, ಸರ್ಪರಾಜ್ ಹಬಿಬುಲ್ಲಾ ಸಲ್ಮಾನಿ ಬಂಧಿತರು. ಶಿರವಾಡದಿಂದ ಬೇಳೂರಿಗೆ ತೆರಳುವ ಕಾಡಿನ ರಸ್ತೆಯಲ್ಲಿ ಕಲ್ಲುಗಳಿಗೆ ಪೂಜೆ ಮಾಡಿ, ದೀಪ ಹಚ್ಚಿಟ್ಟು, ಮೊಳಕೆಯೊಡೆದ ಕಾಯಿಗಳನ್ನು ತಂದಿಟ್ಟುಕೊಂಡು ಸುಮಾರು 15 ಅಡಿ ಬಾವಿ ತೋಡಿದ್ದರು ಎನ್ನಲಾಗಿದೆ.
ಅರಣ್ಯದಲ್ಲಿ ಅಕ್ರಮ ಪ್ರವೇಶ ಮಾಡಿ, ನಿಧಿ ಶೋಧನೆಯಂತ ಮೂಢ ನಂಬಿಕೆ ಆಧಾರಿತ ಧಾರ್ಮಿಕ ಆಚರಣೆಗಾಗಿ ಬಾವಿ ತೋಡಿದ ಬಗ್ಗೆ ದೂರು ದಾಖಲಾಗಿದೆ.
ಡಿಎಫ್‌ಒ ಪ್ರಶಾಂತ ಕೆ.ಸಿ.ಎಸಿಎಫ್ ಜಯೇಶ ಮಾರ್ಗದರ್ಶನದಲ್ಲಿ ಆರ್‌ಎಫ್‌ಒ ರಾಘವೇಂದ್ರ ನಾಯ್ಕ, ಡಿಆರ್‌ಎಫ್‌ಒಗಳಾದ ರೂಪಾ ತಾಮಸೆ, ನವೀನ ಶೆಟ್ಟಿ, ಅರಣ್ಯ ರಕ್ಷಕರಾದ ವೀಣಾ ದೇವಾಡಿಗ, ಸಂಜೀವ ಅಸ್ನೋಟಿಕರ್, ಅರಣ್ಯ ವೀಕ್ಷಕರಾದ ಮಧುಕರ ಗುನಗಿ, ದೇವಿದಾಸ ಗುನಗಿ, ಶಶಿಕಾಂತ ಗುನಗಿ, ವಾಹನ ಚಾಲಕ ಶಶಿಕಾಂತ ಗೋವೇಕರ್ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net