ನಿತ್ಯ ಯೋಗ ರೂಢಿಸಿಕೊಳ್ಳಿ

2606KLB25
Published on

ಕಲಬುರಗಿ: ಯೋಗ ಶಿಕ್ಷಕರ ಮೂಲಕ ಕಲಿತು ನಿತ್ಯ ಯೋಗ, ಧ್ಯಾನ ಮಾಡಿದರೆ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಸುತ್ತದೆ ಎಂದು ಪ್ರೊ.ಚನ್ನಾರಡ್ಡಿ ಪಾಟೀಲ್ ಹೇಳಿದರು.
ನಗರದ ಸರ್ವಜ್ಞ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ಯೋಗ ಹಾಗೂ ವಿಶ್ವ ಸಂಗೀತ ದಿನಾಚರಣೆಯಲ್ಲಿ ಮಾತನಾಡಿ, ಯೋಗದಿಂದ ವಿದ್ಯಾರ್ಥಿಗಳಿಗೆ ಓದಿನ ಒತ್ತಡ ನಿಭಾಯಿಸುವ ಶಕ್ತಿ ಬರುತ್ತದೆ. ಪ್ರಸ್ತುತ ಮಕ್ಕಳು ಹೆತ್ತವರ ಸಣ್ಣ ಪುಟ್ಟ ಮಾತಿಗೂ ಬೇಜಾರು ಮಾಡಿಕೊಂಡು ವಿಕೋಪಕ್ಕೆ ಹೋಗುವ ಪ್ರಸಂಗ ನಡೆಯುತ್ತಿದ್ದು, ಇದಕ್ಕೆ ಯೋಗ, ಧ್ಯಾನ, ಲಿಂಗಪೂಜೆಯಿAದ ಪರಿಹಾರವಿದೆ ಎಂದರು.
ದೇಶ ವಿದೇಶಗಳಲ್ಲಿ ಭಾರತರದ ಯೋಗ, ಆಹಾರ, ಸಂಗೀತ, ಸಂಪ್ರದಾಯ ಅನುಸರಿಸುತ್ತಿದ್ದಾರೆ. ಭಾರತೀಯರಾದ ನಾವು ಹೆಮ್ಮೆಯಿಂದ ಯೋಗವನ್ನು ಅನುಸರಿಸಬೇಕು. ಕರೀದ, ಜಂಕ್ ಫುಡ್‌ನಿಂದ ಮಾನಸಿಕ ಒತ್ತಡ, ಅನಾರೋಗ್ಯ ಸೃಷ್ಟಿಯಾಗುತ್ತದೆ. ಯೋಗ, ಆಟೋಟ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಬೇಕು ಎಂದು ಹೇಳಿದರು.
ಶ್ಲಾಘಿಸಿದರು. ಸರ್ವಜ್ಞ ಚಿಣ್ಣರ ಲೋಕದ ಮಕ್ಕಳಿಂದ ಯೋಗ ಪ್ರದರ್ಶನ ನಡೆಯಿತು. ಸರ್ವಜ್ಞ ಶಾಲೆ ನಿರ್ದೇಶಕಿ ಸಂಗೀತಾ ಪಾಟೀಲ್, ಪ್ರಾಂಶುಪಾಲ ವಿಜಯ ನಾಲವಾರ, ಪ್ರಭುಗೌಡ ಸಿದ್ಧರೆಡ್ಡಿ, ಕರುಣೇಶ ಹಿರೇಮಠ, ಗುರುರಾಜ ಕುಲಕರ್ಣಿ, ಯೋಗ ಶಿಕ್ಷಕರಾದ ಗುರುರಾಜ ಜಾನ್‌ಬೋ ಹಾಗೂ ಸಂಗೀತ ಶಿಕ್ಷಕ ಪಂಚಾಕ್ಷರಿ ಕಣವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net