

ಶನಿವಾರಸಂತೆ: ಸಮಿಪದ ನಿಡ್ತ ಸರ್ಕಾರಿ ಪ್ರೌಢಶಾಲೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿನ ಶಾಲಾವ ಸಂಸತ್ ಚುನಾವಣೆಯನ್ನು ನಡೆಸಲಾಯಿತು.
ಶಾಲೆಯ ಎಲ್ಲ ವಿದ್ಯಾರ್ಥಿಗಳು ಮತದಾನ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು. ಸಾರ್ವತ್ರಿಕ ಚುನಾವಣೆಯಂತೆ ಶಾಲಾ ಸಂಸತ್ ಚುನಾವಣೆಯನ್ನು ನಡೆಸಲಾಯಿತು. ವಿದ್ಯಾರ್ಥಿಗಳು ಮತದಾನ ಮಾಡಲು ಮೊಬೈಲ್‌ನಲ್ಲಿ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಇವಿಎಂ ಆ್ಯಪ್ ಸಿದ್ಧಪಡಿಸಲಾಗಿತ್ತು. ವಿದ್ಯಾರ್ಥಿಗಳು ಮೊಬೈಲ್ ಆ್ಯಪ್ ಮೂಲಕ ಚುನಾವಣೆಯಲ್ಲಿ ಸ್ಪರ್ದಿಸಿದ್ದ ಅಭ್ಯರ್ಥಿಗಳಿಗೆ ಮತದಾನ ಮಾಡಿದರು.
ಶಾಲಾ ಸಂಸತ್ ಚುನಾವಣೆಗೆ 10 ವಿದ್ಯಾರ್ಥಿಗಳು ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು. ಚುನಾವಣೆಯಲ್ಲಿ ಮತಗಟ್ಟೆ ಅಧಿಕಾರಿಯಾಗಿ ಮುಖ್ಯ ಶಿಕ್ಷಕಿ ಎಂ.ಸಿ.ನಳಿನಿ ಕರ್ತವ್ಯ ನಿರ್ವಹಿಸಿದರೆ, ಸಹಾಯಕ ಮತಗಟ್ಟೆ ಅಧಿಕಾರಿಯಾಗಿ ಶಿಕ್ಷಕಿ ಡಿ.ಎಂ.ಮಹಾದೇವಿ ಕರ್ತವ್ಯ ನಿರ್ವಹಿಸಿದರು. ಸಂಸದ್ ಚುನಾವಣೆಯ ಸಿಬ್ಬಂದಿಯಾಗಿ ಹಿರಿಯ ಶಿಕ್ಷಕರಾದ ಎಂ.ವಿ.ರೂಪಾ, ಮಾರುತಿ ಅರೇರ್, ವಿ.ಡಿ.ಗೀತಾ, ಪ್ರಿಯಾಂಕ ಚಿಪಾಳೂಣಕರ್, ಮಧುಕುಮಾರ್ ಪಾಲ್ಗೊಂಡಿದ್ದರು.