ನಿಜ ನಾಗರಕ್ಕೆ ಹಾಲೆರೆದು ಪೂಜೆ

Havu
Published on

ಶಿರಸಿ: ಇಲ್ಲಿನ ಉರಗ ರಕ್ಷಕ ಪ್ರಶಾಂತ ಹುಲೇಕಲ್ ಕುಟುಂಬದ ಸದಸ್ಯರು ಮಂಗಳವಾರ ನಿಜನಾಗರಕ್ಕೆ ಹಾಲೆರೆದು ನಾಗಪಂಚಮಿ ಪೂಜೆ ಆಚರಿಸಿದರು. ಪ್ರತಿವರ್ಷ ಒಂದು ನಾಗರಹಾವಿಗೆ ಪೂಜೆ ಮಾಡುತ್ತಿದ್ದ ಪ್ರಶಾಂತ ಕುಟುಂಬ ಈ ಬಾರಿ ಮೂರು ನಾಗರ ಹಾವುಗಳನ್ನು ತಂದು ಪೂಜೆ ಸಲ್ಲಿಸಿದ್ದಾರೆ.

ಶಿರಸಿ,ನಿಜ, ನಾಗರ ಹಾವಿಗೆ,ಹಾಲೆರೆದು, ಪೂಜೆ, 37 ವರ್ಷಗಳಿಂದ ನಿರಂತರವಾಗಿ ಉರಗ ಸಂತತಿಯ ಸಂರಕ್ಷಣೆ ಬಗ್ಗೆ ವಿಶೇಷ ಕಾಳಜಿ ತೋರುತ್ತ ಬಂದಿದೆ ಪ್ರಶಾಂತ ಹುಲೇಕಲ್ ಕುಟುಂಬ. ನಾಗರ ಪಂಚಮಿ ಹಬ್ಬವನ್ನು ನಾಗ ಸಂತತಿಯ ಬಗ್ಗೆ ಸಂದೇಶ ಸಾರಲು ಬಳಸಿಕೊಳ್ಳುತ್ತಿದೆ. ಕುಟುಂಬದ ಹಿರಿಯ ಸುರೇಶ ಅವರ ಮರಣದ ಬಳಿಕ ಅವರ ಮಕ್ಕಳಾದ ಪ್ರಶಾಂತ ನಿಜವಾದ ಹಾವಿಗೆ ಪೂಜೆ ಸಲ್ಲಿಸಿ ನಾಗಪಂಚಮಿ ಆಚರಣೆ ಮಾಡುತ್ತಿದ್ದಾರೆ. ವಿಷದ ಹಲ್ಲುಗಳಿರುವ ಸರ್ಪಗಳನ್ನು ಮನೆಯೊಳಗೆ ಪ್ರತಿಷ್ಠಾಪಿಸಿ ಕಲ್ಲು ನಾಗರಗಳಿಗೆ ಹಾಲೆರೆದಂತೆ ಅವುಗಳಿಗೆ ಹಾಲೆರೆದು ಪೂಜೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net