ನಿಗದಿತ ಸ್ಥಳದಲ್ಲಿ ವಾಹನ ನಿಲ್ಲಿಸಲು ಕ್ರಮ

parking
Published on

ಕಲಬುರಗಿ: ನಗರದಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು, ಹೀಗಾಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಮಗದಿಂದ ಎಲ್ಲ ಸರ್ಕಲ್‌ಗಳಲ್ಲಿ ನಿಗಮದ ವಾಹನ ನಿಲ್ಲದಂತೆ ಕ್ರಮಕೈಗೊಳ್ಳುವುದರ ಜತೆಗೆ ೪೦ರಿಂದ ೫೦ ಮೀ ಮುಂದಕ್ಕೆ ಹೋಗಿ ವಾಹನ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿ/ ಇಳಿಸಬೇಕು ಎಂದು ನಿಗಮದ ಕಲಬುರಗಿ ವಿಭಾಗ-೨ರ ವಿಭಾಗೀಯ ನಿಯಂತ್ರಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ. ಹೀರಾಪೂರ ರಿಂಗ್‌ರೋಡ್, ಹುಮನಾಬಾದ್ ರಿಂಗ್ ರೋಡ್, ಆಳಂದ ಚೆಕ್‌ಪೋಸ್ಟ್, ಸೇಡಂ ರಿಂಗ್ ರೋಡ್, ಶಾಹಾಬಾದ್ ರಿಂಗ್‌ರೋಡ್, ತಾಜ್ ಸುಲ್ತಾನಪುರ ಕ್ರಾಸ್, ರಾಮಮಂದಿರ ಸರ್ಕಲ್ ಸೇರಿ ಇತರೆಡೆ ನಿಗಮದ ವಾಹನಗಳು ನಿಲ್ಲಿಸದಂತೆ ಕ್ರಮ ಕೈಗೊಳ್ಳಲಾಗಿದೆ. ಯಾವುದೇ ಅಪಘಾತ/ಅವಘಡ ಸಂಭವಿಸದAತೆ ಹಾಗೂ ಪ್ರಯಾಣಿಕರಿಗೆ ತೊಂದರೆಯಾಗದAತೆ ನೋಡಿಕೊಳ್ಳಲು ಈ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net