ನಿಗದಿತ ಸಮಯಕ್ಕೆ ಸಾಲ ಮರು ಪಾವತಿ ಮಾಡಿ

11-02--25--krs1
Published on

ಕೆ.ಆರ್.ಸಾಗರ: ಕಷ್ಟದ ಸಮಯದಲ್ಲಿ ಸಹಕಾರ ಸಂಘಗಳಿಂದ ಸಾಲ ಪಡೆದು ನಿಗದಿತ ಸಮಯಕ್ಕೆ ಮರು ಪಾವತಿ ಮಾಡುವಂತೆ ಕೆ.ಆರ್.ಸಾಗರ ಗ್ರಾಮ ಪಂಚಾಯಿತಿ ಸದಸ್ಯ ನಾಗೇಂದ್ರಕುಮಾರ್ ಸಲಹೆ ನೀಡಿದರು.

ಅನ್ವೇಷಣಾ ಅಭ್ಯುದಯ ಸಹಕಾರ ಸಂಘದ ವತಿಯಿಂದ ಕೆ.ಆರ್.ಸಾಗರದ ರಾಮಮಂದಿರದಲ್ಲಿ ಮಂಗಳವಾರ ಏರ್ಪಡಿಸಿದ್ದ ಗ್ರಾಹಕರ ಪ್ರತಿನಿಧಿ ಹಾಗೂ ಗ್ರಾಹಕರ ಸಭೆಯಲ್ಲಿ ಮಾತನಾಡಿದರು.

ಸಾಲ ಪಡೆದ ರೀತಿಯಲ್ಲಿ ಪಾವತಿಯನ್ನೂ ಅಷ್ಟೇ ಪ್ರಾಮಾಣಿಕವಾಗಿ ಮಾಡಿದಾಗ ಅದು ಮತ್ತೊಬ್ಬರಿಗೆ ಸಹಾಯ ಮಾಡಿದಂತೆಯೇ ಆಗುತ್ತದೆ ಎಂದರು.

ಅನ್ವೇಷಣಾ ಅಭ್ಯುದಯ ಸಹಕಾರ ಸಂಘದ ಮುಖ್ಯ ವ್ಯವಸ್ಥಾಪಕಿ ರಶ್ಮಿ ದಿನೇಶ್ ದೀಪ ಬೆಳಗುವ ಮೂಲಕ ಸಭೆಗೆ ಚಾಲನೆ ನೀಡಿದರು.

ರಶ್ಮಿ ದಿನೇಶ್ ಮಾತನಾಡಿ, ನಮ್ಮ ಸಂಘ ಸದಸ್ಯರ ಅನುಕೂಲಕ್ಕೆ ತಕ್ಕಂತೆ ಉಳಿತಾಯ ಮಾಡಲು ಪ್ರೇರೇಪಣೆ ನೀಡುತ್ತದೆ. ಸರ್ಕಾರದ ಮಾರ್ಗಸೂಚಿಯಂತೆ ಸಾಲ ನೀಡುತ್ತೇವೆ, ಗ್ರಾಹಕರ ಕಷ್ಟಗಳಿಗೆ ಸ್ಪಂದಿಸುತ್ತೇವೆ. ಅದರಂತೆ ಗ್ರಾಹಕರೂ ಮರು ಪಾವತಿಯ ಬಗ್ಗೆ ಸಹಕಾರ ನೀಡುತ್ತಿದ್ದಾರೆ ಎಂದರು.

ಅನ್ವೇಷಣಾ ಅಭ್ಯುದಯ ಸಹಕಾರ ಸಂಘದ ವ್ಯವಸ್ಥಾಪಕ ಅಶೋಕ, ಸಹಕಾರ ಸಂಘದಿಂದ ಸಿಗುವ ಸೌಲಭ್ಯಗಳು ಹಾಗೂ ಕಾನೂನು ಚೌಕಟ್ಟುಗಳ ಬಗ್ಗೆ ಮಾಹಿತಿ ನೀಡಿದರು.

ಕೆ.ಆರ್.ಸಾಗರ ಗ್ರಾಪಂ ಉಪಾಧ್ಯಕ್ಷ ರವಿಶಂಕರ್, ಸದಸ್ಯರಾದ ನಾಗೇಂದ್ರಕುಮಾರ್, ಸುಧಾ, ಅನ್ವೇಷಣಾ ಅಭ್ಯುದಯ ಸಹಕಾರ ಸಂಘದ ಕ್ಷೇತ್ರ ವ್ಯವಸ್ಥಾಪಕಿ ಲಕ್ಷ್ಮೀ, ಸುನೀಲ್, ಕೆ.ಆರ್.ಸಾಗರ ವ್ಯಾಪ್ತಿಯ ಪ್ರತಿನಿಧಿಗಳು, ಸಂಘದ ನೂರಾರು ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net