ನಾವು ಆರಿಸಿದ ಸರ್ಕಾರ ನಮಗೆ ಅನುಕೂಲ ಮಾಡಬೇಕು

bkt-17-11
ಬಾಗಲಕೋಟೆ ಕೃಷ್ಣ ಮಠಕ್ಕೆ ಮಂಗಳವಾರ ಭೇಟಿ ನೀಡಿದ್ದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳರವರು ಮಠದಲ್ಲಿ ಕೃಷ್ಣನ ಮೂರ್ತಿಗೆ ಮಂಗಳರಾತಿ ನೆರವೇರಿಸಿದರು.
Published on

ಬಾಗಲಕೋಟೆ: ಜರ್ವೆ ಜನ ಸುಖಿನೋ ಭವಂತು ನಾವು ಹೇಳುವುದು ಇಷ್ಟೆ. ಇದು ನಾವು ಆರಿಸಿ ಕಳುಹಿಸಿದ ಸರ್ಕಾರ. ಹೀಗಾಗಿ ಸರ್ಕಾರ ನಮಗೆ(ಜನರಿಗೆ) ಅನುಕೂಲ ಆಗುವ ರೀತಿ ಕೆಲಸ ಮಾಡಲೇಬೇಕು, ಮಾಡುತ್ತಾರೆ ಎಂದು ಉಡುಪಿ ಪೇಜಾವರ ಮಠದ ಪೂಜ್ಯ ವಿಶ್ವಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.

ಬಾಗಲಕೋಟೆಯಲ್ಲಿ ಮಂಗಳವಾರ ಕೃಷ್ಣ ಮಠಕ್ಕೆ ಭೇಟಿ ನೀಡಿದ ಅವರು ಸುದ್ದಿಗಾರರು, ಯುಕೆಪಿ-ಹಂತ ೩ಕ್ಕೆ ಸರ್ಕಾರ ಅನುಸರಿಸುತ್ರತಿರುವ ವಿಳಂಬ ನೀತಿಯ ಬಗ್ಗೆ ಕೇಳಿದಾಗಿ ಅವರು ಈ ಮೇಲಿನಂತೆ ಉತ್ತರಿಸಿದರು.

ಕಳೆದ ೧೫ ದಿನಗಳಿಂದ ಬಾಗಲಕೋಟೆಯಲ್ಲಿ ಮುಳುಗಡೆ ಸಂತ್ರಸ್ತರು ನಡೆಸುತ್ತಿರುವ ಹೋರಾಟದ ಬಗ್ಗೆ ತಿಳಿಸಿದಾಗ, ಹೋರಾಟವೂ ಸ್ಥಳೀಯ ಜನಪ್ರತಿನಿಽಗಳು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನೆಡೆಯಬೇಕು. ಇಲ್ಲಿನ ಜನಪ್ರತಿನಿಽಗಳ ಮೂಲಕವೇ ಈ ಸಮಸ್ಯೆ ಬಗೆಹರಿಯಬೇಕು ಎಂದು ಸಲಹೆ ನೀಡಿದ ಸ್ವಾಮೀಜಿ, ಸರ್ಕಾರ ಎಲ್ಲರ ಬೇಡಿಕೆಯನ್ನು ಗಮನಿಸುತ್ತದೆ. ಅದರ ಅನುಕೂಲಕ್ಕೆ ತಕ್ಕಂತೆ ನಡೆಯುತ್ತದೆ. ಈ ಬಗ್ಗೆ ಸರ್ಕಾರದ ಬಳಿ ಕೇಳಬೇಕು, ನಾವೆಂತು ಮಾಡುವುದು ಎಂದರು.

ಉತ್ತರ ಕರ್ನಾಟಕಕ್ಕೆ ನಿರಂತರ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ, ಅನೇಕರು ಪ್ರತ್ಯೇಕ ರಾಜ್ಯದ ಬಗ್ಗೆ ಧ್ವನಿ ಎತ್ತುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಗಳು, ಎಲ್ಲರ ಏಳಿಗೆಗೆ, ಎಲ್ಲರಿಗೂ ಅನುಕೂಲವಾಗುವ ತೀರ್ಮಾನಗಳು ಅಲ್ಲಿ(ಬೆಳಗಾವಿ ಅಽವೇಶನ) ಬರಲಿ, ಎಲ್ಲರಿಗೂ ಒಳ್ಳೆಯದಾಗಬೇಕು ಎಂದು ಹೇಳಿದರು.

ಒಂದು ರಾಷ್ಟç ಒಂದು ಚುನಾವಣೆ ಎನ್ನುವ ಮಸೂದೆ ಮಂಡಿಸಲು ಮುಂದಾಗಿರು ಕೇಂದ್ರ ಸರ್ಕಾರದ ಬಗ್ಗೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕೆಲವರು ವಿರೋಧ ವ್ಯಕ್ತಪಡಿಸಿರುವ ಬಗ್ಗೆ, ಎಲ್ಲವೂ ಆದರೆ ಒಳ್ಳೆಯದು. ಆದರೆ, ಈ ಬಗ್ಗೆ ಸಾಧಕ, ಬಾಧಕಗಳ ಬಗ್ಗೆ ಚರ್ಚೆಗಳು ಆಗಲಿ. ಚರ್ಚೆ ಆಗದ ಹೊರತು ಈ ಬಗ್ಗೆ ನಾವು ನೇರವಾಗಿ ಹೇಳಲು ಸಾಧ್ಯವಿಲ್ಲ. ಎಲ್ಲ ಸಾಧಕ, ಬಾಧಕಗಳ ಬಗ್ಗೆ ಚರ್ಚೆ ಮಾಡಿದಾಗ ಆಗ ಒಂದು ತೀರ್ಮಾನಕ್ಕೆ ಬರಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net