ಕಲಬುರಗಿ :-ರಾಜ್ಯದ ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಂ ಖಾನ್ ಅವರು ಬೆಂಗಳೂರಿನಿಂದ ಸ್ಟಾರ್ ಏರ್ ವಿಮಾನದ ಮೂಲಕ ಆಗಸ್ಟ್ ೫ ರಂದು ಶನಿವಾರ ಬೆಳಿಗ್ಗೆ ೯.೫೦ ಗಂಟೆಗೆ ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು.
ನಂತರ ಬೆಳಿಗ್ಗೆ ೧೧.೩೦ ಗಂಟೆಗೆ ಕಲಬುರಗಿ ನಗರದ ಎನ್.ವಿ. ಮೈದಾನದಲ್ಲಿ ಇಂಧನ ಇಲಾಖೆಯ ವತಿಯಿಂದ ಆಯೋಜಿಸಿರುವ ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ “ಗೃಹ ಜ್ಯೋತಿ ಯೋಜನೆ”ಗೆ ಮುಖ್ಯಮಂತ್ರಿಗಳು ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ನಂತರ ಸಂಜೆ ೪.೧೫ ರಿಂದ ರಾತ್ರಿ ೮ ಗಂಟೆಯವರೆಗೆ ಸಾರ್ವಜನಿಕರನ್ನು ಭೇಟಿ ಮಾಡಿ ನಂತರ ಕಲಬುರಗಿಯಲ್ಲಿ ವಾಸ್ತವ್ಯ ಮಾಡುವರು.