ನಾಲ್ಕುನಾಡು ಸುತ್ತಮುತ್ತ ತಂಪೆರೆದ ವರುಣ

18.npk...5
Published on

ನಾಪೋಕ್ಲು: ನಾಲ್ಕು ನಾಡು ಸುತ್ತಮುತ್ತಲ ಗ್ರಾಮ ವ್ಯಾಪ್ತಿಯಲ್ಲಿ ಮಂಗಳವಾರ ಒಂದು ಇಂಚಿಗೂ ಅಧಿಕ ಮಳೆ ಸುರಿದಿದೆ.

ಸೋಮವಾರ ರಾತ್ರಿ ಕೆಲವು ಗ್ರಾಮಗಳಲ್ಲಿ ಸಾಧಾರಣ ಮಳೆಯಾಗಿತ್ತು. ಮಂಗಳವಾರ ಮಧ್ಯಾಹ್ನದ ಮೇಲೆ ನಾಪೋಕ್ಲು ಪಟ್ಟಣ ಸೇರಿದಂತೆ ಬೇತು, ಅಯ್ಯಂಗೇರಿ, ದೊಡ್ಡಪುಲಿಕೋಟು , ಬಲ್ಲಮ್ಮಾವಟಿ ನೆಲಜಿ, ಕೊಳಕೇರಿ, ಎಮ್ಮೆಮಾಡು, ಚೋನಕೆರೆ, ಕೊಟ್ಟಮುಡಿ ಸೇರಿದಂತೆ ಹಲವು ಕಡೆ 20, 30 ಸೆಂಟ್ ಮಳೆಯಿಂದ ಒಂದು ಇಂಚಿಗೂ ಅಧಿಕ ಗುಡುಗು ಸಹಿತ ಗಾಳಿ ಮಳೆಯಾಗಿ ಭೂಮಿ ತಂಪೆರೆದಿದೆ.

ನಾಪೋಕ್ಲು ಜಿಎಂಪಿ ಶಾಲೆಯ ಸಮೀಪ ರಸ್ತೆಗೆ ಸಮರ್ಪಕವಾದ ಚರಂಡಿ ವ್ಯವಸ್ಥೆಯಿಲ್ಲದ ಪರಿಣಾಮ ಮಳೆ ನೀರು ರಸ್ತೆಯಲ್ಲಿ ಹೊಳೆಯಂತೆ ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕಳೆದ ಬುಧವಾರ ವರ್ಷದ ಪ್ರಥಮ ಮಳೆಯಾಗಿತ್ತು. ಮಂಗಳವಾರ ವರ್ಷದ 4ನೇ ಮಳೆಯಾಗಿ ಕಾಫಿ ಬೆಳೆಗಾರರ ಮುಖದಲ್ಲಿ ಸಂತಸ ಮೂಡಿಸಿದೆ.

ಇದೀಗಾಗಲೇ ಕಾಫಿ ಫಸಲಿನ ಕೊಯ್ಲು ಮುಗಿದಿದ್ದು ಬಹುತೇಕ ಕಡೆ ಕಾಫಿ ಬೆಳೆಗಾರರು ಸ್ಪ್ರಿಂಕ್ಲರ್ ಮೂಲಕ ನೀರು ಹಾಯಿಸಿ ಕಾಫಿ ಹೂವು ಅರಳಿಸುವ ಪ್ರಯತ್ನದಲ್ಲಿ ಮುಂದಾಗಿದ್ದರು, ಇದೀಗ ಬರುತ್ತಿರುವ ಮಳೆ ಕಾಫಿ ತೋಟ ಗಳಿಗೆ ಪೂರಕವಾಗಿದ್ದು ವೆಚ್ಚವನ್ನು ಕಡಿಮೆಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net