ನಾಲ್ಕನೇ ದಿನ ೩ ನಾಮಪತ್ರ ಸಲ್ಲಿಕೆ

bkt-17-5
ಪಕ್ಷೇತರ ಅಭ್ಯರ್ಥಿಯಾಗಿ ಪರಶುರಾಮ ನೀಲನಾಯಕ ನಾಮಪತ್ರ ಸಲ್ಲಿಸಿದರು.
Published on

ಬಾಗಲಕೋಟೆ: ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ನಾಲ್ಕನೇ ದಿನವಾದ ಬುಧವಾರದಂದು ಒಟ್ಟು ೩ ನಾಮಪತ್ರ ಸಲ್ಲಿಕೆಯಾಗಿವೆ. ಕರ್ನಾಟಕ ರಾಷ್ಟç ಸಮಿತಿ ಪಕ್ಷದಿಂದ ಸಾಗರ ಬಸಪ್ಪ ಕುಂಬಾರ, ಪಕ್ಷೇತರ ಅಭ್ಯರ್ಥಿಗಳಾಗಿ ಪರಶುರಾಮ ಲಕ್ಷö್ಮಣ ನೀಲನಾಯಕ, ದತ್ತಾತ್ರೇಯ ದಶರಥ ತಾವರೆ ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ. ಪ್ರಾರಂಭದಿಂದ ಇಲ್ಲಿಯವರೆಗೆ ೧೦ ಅಭ್ಯರ್ಥಿಗಳಿಂದ ಒಟ್ಟು ೧೧ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net