

ತುಮಕೂರು: ಸಚಿವ ನಾರಾಯಣಗೌಡ ದಾರಿತಪ್ಪಿ ಜೆಡಿಎಸ್ ಬಸ್ ಹತ್ತಿದ್ದವರು, ಈಗ ಎಲ್ಲೊ ಹೋದರೆ ನಾವೇನು ಮಾಡಲಿ ಎಂದು ಬಾಂಬೆ ಬಾಯ್ಸ್ ಪಕ್ಷಾಂತರದ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.
ಇಂದು ತಿಪಟೂರಿನಲ್ಲಿ ಪಂಚರತ್ನ ಯಾತ್ರೆಯಲ್ಲಿ ಭಾಗವಹಿಸಿದ್ದ ಅವರು, ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರ ವಿರುದ್ಧ ದೇವೇಗೌಡರನ್ನೇ ಸ್ಪರ್ಧೆಗೆ ಸವಾಲಾಕಿರುವ ದೊಡ್ಡವರ ವಿರುದ್ಧ ನಾನು ಏನು ಹೇಳಲಿ ಎಂದು ವ್ಯಂಗ್ಯವಾಡಿದರು.