ನಾರಾಯಣ ಗುರು, ಮಹಾತ್ಮ ಅಯ್ಯನ್ ಕಾಳಿ ಹಾಕಿದ ದಾರಿಯಲ್ಲಿ ನಡೆಯೋಣ

31Kush02
Published on

ಕುಶಾಲನಗರ: ಸಮಾಜದಲ್ಲಿ ಅಸ್ಪಶ್ಯರಂತೆ ಕಾಣುತ್ತಿದ್ದ ಸಮುದಾಯವನ್ನು ಗುರುತಿಸುವಂತೆ ಮಾಡಿದ ಮಹಾಪುರುಷರಾದ ಶ್ರೀ ನಾರಾಯಣ ಗುರುಗಳು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರಂತಹ ಮಹಾತ್ಮರ ವಿಚಾರಧಾರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು ಎಂದು ಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ವಿ.ಕೆ.ಲೋಕೇಶ್ ಹೇಳಿದರು.


ನಗರದ ಮಹಾಲಕ್ಷ್ಮಿ ರೆಸಿಡೆನ್ಸಿ ಸಭಾಂಗಣದಲ್ಲಿ ಬುಧವಾರ ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪಂಗಡದ ನಿವೃತ್ತ ನೌಕರರ ಸಂಘದ ವತಿಯಿಂದ ನಡೆದ ಶ್ರೀ ನಾರಾಯಣ ಗುರುಗಳ 169ನೇ ಮತ್ತು ಮಹಾತ್ಮ ಅಯ್ಯನ್ ಕಾಳಿ ಅವರ 160ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರೀ ನಾರಾಯಣ ಗುರುಗಳು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರು ಹಾಕಿಕೊಟ್ಟ ಶ್ರೇಷ್ಠ ದಾರಿಯಲ್ಲಿ ಸಂಘಟಿತರಾಗಿ ನಡೆಯಬೇಕು ಎಂದು ಕರೆ ನೀಡಿದರು.


ದಸಂಸ ಭೀಮವಾದ ರಾಜ್ಯ ಸಂಘಟನಾ ಸಂಚಾಲಕ ಕೆ.ಬಿ.ರಾಜು ಮಾತನಾಡಿ, ಶ್ರೀ ನಾರಾಯಣ ಗುರುಗಳು ಹಾಗೂ ಮಹಾತ್ಮ ಅಯ್ಯನ್ ಕಾಳಿ ಅವರು ಸಮಾಜದಲ್ಲಿ ಜಾಗೃತಿ ಮೂಡಿಸಿ ಸಮಾನತೆ ಹಾದಿಗೆ ತರಲು ಪ್ರಯತ್ನ ಮಾಡುತ್ತಿದ್ದರು. ಇಂತಹ ಇಂಥವರ ಶ್ರಮದ ಫಲದಿಂದ ಸಮಾನತೆ, ಏಕತೆ ಹಾಗೂ ಸಹೋದರತ್ವ ಕಾಣುತ್ತಿದ್ದೇವೆ ಎಂದು ಹೇಳಿದರು.


ಕೊಡಗು ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎನ್.ಅಶೋಕ, ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿದರು.


ಕೊಡಗು ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ವಿಚಾರವಾದಿ ವೆಂಕಟ್ ನಾಯಕ್, ಎಸ್.ಜೆ.ಸತೀಶ್, ಜಯಪ್ಪ ಹಾನಗಲ್, ಎಸ್.ಕೆ.ಸ್ವಾಮಿ, ಡಿ.ಟಿ.ಸುರೇಶ್ ಕುಮಾರ್, ಎಸ್.ಜೆ.ರಾಜ್, ಸ್ವಾಮಿ, ವೆಂಕಟೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net