ನಾಯಿ ದಾಳಿಯಿಂದ ಜಿಂಕೆ ಸಾವು

26sirsi3
Published on

ಶಿರಸಿ: ನಾಯಿಗಳ ದಾಳಿಯಿಂದ ಕಂಗೆಟ್ಟ ಜಿಂಕೆ ಹೃದಯಾಘಾತಕ್ಕೆ ಒಳಗಾಗಿ ಪ್ರಾಣಬಿಟ್ಟ ಘಟನೆ ತಾಲೂಕಿನ ಬನವಾಸಿ ಅರಣ್ಯ ವಲಯದ ಸಂತೋಳ್ಳಿಯಲ್ಲಿ ಭಾನುವಾರ ನಡೆದಿದೆ.

ಕಾಡಿನಲ್ಲಿ ನಾಯಿಯ ದಾಳಿಗೊಳಗಾದ ಜಿಂಕೆ ಜೀವ ಉಳಿಸಿಕೊಳ್ಳಲು ಸಂತೋಳ್ಳಿ ಗ್ರಾಮಕ್ಕೆ ಬಂದಿದೆ. ಜಿಂಕೆಯನ್ನು ನೋಡಿದ ಗ್ರಾಮಸ್ಥರು ನಾಯಿಯನ್ನು ಓಡಿಸಿ, ಆರೈಕೆ ಮಾಡಿ, ಅರಣ್ಯ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಆದರೆ ದಾಳಿಯ ಆಘಾತದಿಂದ ಹೃದಯಾಘಾತವಾಗಿ ಜಿಂಕೆ ಮೃತಪಟ್ಟಿದೆ. ಜಿಂಕೆಯ ಆರೈಕೆಗೆ ಆಗಮಿಸಿದ್ದ ವೈದ್ಯರು ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ನಂತರ ಇಲಾಖೆಯ ನಿಯಮಾನುಸಾರ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net