ನಾನು ಹುಟ್ಟಿದಾಗ ಯೋಜನೆ ಚಾಲು ಆಗೈತಿ

bkt-7-1
ಬಾಗಲಕೋಟೆ ನಗರದ ಡಿಸಿ ಕಚೇರಿ ಎದುರು ಶನಿವಾರ ಕೃಷ್ಣಾ ಮೇಲ್ದಂಡೆ ಯೋಜನೆ ಬಾಽತ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಶಾಸಕ, ಬಿಜೆಪಿ ನಾಯಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.
Published on

ಬಾಗಲಕೋಟೆ: ಪುಣ್ಯಾತ್ಮ, ಪ್ರಮಾಣಿಕ ಮನುಷ್ಯ ಲಾಲ್ ಬಹದ್ದೂರ ಶಾಸಿö ೧೯೬೪ ರಲ್ಲಿ ಆಲಮಟ್ಟಿ ಆಣೆಕಟ್ಟಿಗೆ ಅಡಿಗಲ್ಲು ಹಾಕಿದರು. ೧೯೬೩ ಡಿಸೆಂಬರ್ ೧೩ ಜನರನ್ನು ಹುಟ್ಟಿದ್ದೇನೆ. ಹೆಚ್ಚು-ಕಮ್ಮಿ ನಾನ ಹುಟ್ಟಿದಾಗ ಯೋಜನೆ ಚಾಲು ಆಗೈತಿ ಮಣ್ಣಿಗೆ ಹೋಗೋದು ಬಂದರು ಇನ್ ಮುಗಿದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಕೃಷ್ಣಾ ಸಂತ್ರಸ್ತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು, ನಾನು ಮಂತ್ರಿಗಾಗಿ ಕೈಕಾಲು ಹಿಡಿಯಲ್ಲ. ಹೀಗಾಗಿ ಪ್ರಶ್ನೆ ಮಾಡುತ್ತಲೆ ಇರುತ್ತೇನೆ. ಯಾವುದೇ ಸರ್ಕಾರ ಇರಲಿ ಕಮೀಷನ್ ಹೊಡೆಯೋಕೆ, ನೀರಾವರಿ ಮಂತ್ರಿ ಆಗೋಕೆ ಬಡಿದಾಡುತ್ತಾರೆ. ಆಲಮಟ್ಟಿ ಡ್ಯಾಮ್ ನಿರ್ಮಿಸೋಕೆ ನಡೆದ ಭ್ರಷ್ಟಾಚಾರ ನೋಡಿದರೇ ಇನ್ನು ೧೦ ಡ್ಯಾಮ್ ಕಟ್ಟಬಹುದಿತ್ತು. ಸರ್ಕಾರದ ಆಸ್ತಿ ಮಾರಾಟ ಮಾಡಿ ಪರಿಹಾರ ಧನ ಕೊಡೋದು ಬೇಡ. ತನಿಖೆ ಮಾಡಿ ದೊಡ್ಡ ತಿಮಿಂಗಲ್ ಬೇಟೆಯಾಡಿದ್ರ ೧ ಲಕ್ಷ ಕೋಟಿ ಬರುತ್ತೆ. ಅದನ್ನು ವಸೂಲಿ ಮಾಡಿದ್ರ ಒಂದೇ ವರ್ಷದಾಗ ಯೋಜನೆ ಪೂರ್ಣಗೊಳಿಸಬಹುದು ಎಂದು ಯತ್ನಾಳ ಹೇಳಿದರು.

ಪೀಡಾ ಮತ್ ಬಂತು ಅಂತಾರ...

ಕಳೆದ ಚುನಾವಣೆಯಲ್ಲಿ ನನ್ನ ಸೋಲಿಸಲು ಕೋಟ್ಯಂತರ ರೂ. ಹಣ ಕಳುಹಿಸಿಕೊಟ್ಟಿದ್ದರು. ಆದರು ಆರಿಸಿ ಬಂದೇ, ಪೀಡಾ ಬರಾಂಗಿಲ್ಲ ಅಂದುಕೊAಡಿದ್ದರು. ಮತ್ತೆ ಬಂದೇ. ನನ್ನ ಬಗ್ಗೆ ಕೆಟ್ಟದು ಬಯಸಿದಷ್ಟು ನನಗೆ ಒಳ್ಳೆಯದಾಗುತ್ತದೆ. ಹೀಗಾಗಿ ಸತ್ಯ ನುಡಿಯಲು ಹಿಂಜರಿಯುವದಿಲ್ಲ. ವಿಜಯಪುರದಲ್ಲಿ ನನ್ನ ಮನೆ ಪಕ್ಕ ವಿಮಾಣ ನಿಲ್ದಾಣ ಮಾಡಿದ್ದಾರೆ. ನಾನು ಬೇಡ ಆಲಮಟ್ಟಿಗೆ ಮಾಡಿ ಪ್ರವಾಸೋದ್ಯ ಬೆಳೆಯುತ್ತೆ ಅಂದೆ. ಆದರೇ ದೊಡ್ಡವರ ಜಮೀನು ಬೇರೆಯವರ ಹೆಸರಲ್ಲಿ ಇದ್ದವು. ಹಣ ಹೊಡೆಯೋಕೆ ಅಲ್ಲಿ ಮಾಡಿದರು. ಭೂ ಸ್ವಾಽÃನದಲ್ಲಿ ಲೀಡರಗಳ ಕೈವಾಡ ಇರುತ್ತೆ. ಅನೇಕ ಜನ ಪ್ರಾಣ, ರಕ್ತ, ರಾಜೀನಾಮೆ ಕೊಡ್ತೀನಿ ಅಂತಾರ. ನಮಗೆ ಅದು ಯಾವುದು ಬೇಡ. ನಾನಂತು ಹಾಗೇ ಹೇಳುವದಿಲ್ಲ. ಹೋರಾಟ ಮಾಡೋನ ನಡಿರೀ ಅಂತಿನಿಎAದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net