ಯಳಂದೂರು: ತಾಲೂಕಿನ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಾಡಬಂದೂಕು ಹೊಂದಿದ್ದು ಬೇಟೆಗೆ ಹೊರಟಿದ್ದವನನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.
ಕುಣಗಳ್ಳಿ ಗ್ರಾಮದ ಕೆಂಪಶೆಟ್ಟಿ ಬಂಧಿತ. ಕುಣಗಳ್ಳಿ ಗ್ರಾಮದ ಕೆರೆಯ ಬಳಿ ವ್ಯಕ್ತಿಯೊಬ್ಬ ಅಕ್ರಮವಾಗಿ ನಾಡಬಂದೂಕು ಹಿಡಿದು ಅಡ್ಡಾಡುತ್ತಿದ್ದಾನೆ ಎಂಬ ಮಾಹಿತಿ ತಿಳಿದ ಪೊಲೀಸರು ಭಾನುವಾರ ಬೆಳಗ್ಗೆ ಕಾರ್ಯಾಚರಣೆ ನಡೆಸಿದರು. ಆತ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ವ್ಯಾಪ್ತಿಯಲ್ಲಿ ಕಾಡು ಪ್ರಾಣಿಗಳ ಬೇಟೆಗೆ ತೆರಳಿದ್ದ ಎನ್ನಲಾಗಿದೆ.
ಈತನ ವಿರುದ್ಧ ಅಗರ-ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ಕ್ರಮ ವಹಿಸಲಾಗಿದೆ. ಸಿಪಿಐ ಕೆ.ಶ್ರೀಕಾಂತ್, ಸಿಬ್ಬಂದಿ ಸುಕ್ರನಾಯಕ, ಪರಶಿವಮೂರ್ತಿ, ಶಿವಕುಮಾರ್, ಶಿವು, ಉಸ್ಮಾನ್, ಮಲ್ಲೇಶ್, ಬಸವರಾಜು ಇದ್ದರು.