

ಕಲಬುರಗಿ: ಮಾತೃ ಭಾಷೆ, ನಾಡು-ನುಡಿಯ ಸಂಸ್ಕೃತಿ ಕಟ್ಟಿ ಬೆಳೆಸಲು ಕನ್ನಡದ ಸಂವೇದನಾಶೀಲ ಮನಸ್ಸಿನ ಸಾರಥಿಗಳು ಅವಶ್ಯ ಎಂದು ನಾಡೋಜ ಡಾ.ಪಿ.ಎಸ್.ಶಂಕರ ಹೇಳಿದರು.
ನಗರದ ಕನ್ನಡ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಶನಿವಾರ ಏರ್ಪಡಿಸಿದ್ದ `ಕನ್ನಡ ಸಾರಥಿ' ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿ, ಭಾಷೆ ಮತ್ತು ಸಂಸ್ಕೃತಿ ಆಚರಣೆಗಳು ಅಸ್ಮಿತೆ ಹೆಚ್ಚಿಸುತ್ತದೆ. ಕಸಾಪ ಅಧ್ಯಕ್ಷರ ಜೀವನ ಕುರಿತ ಕೃತಿ ಉಪಯುಕ್ತವಾಗಲಿದೆ. ಕೃತಿಗಳಿಂದ ನೆಲದ ಸೊಗಡು ಹೆಚ್ಚುತ್ತದೆ ಎಂದರು.
ನಗರ ಪೊಲೀಸ್ ಆಯುಕ್ತ ಚೇತನ್ ಆರ್. ಮಾತನಾಡಿ, ಸಾಹಿತ್ಯ ಮನಸ್ಸುಗಳನ್ನು ಬೆಸೆಯುತ್ತದೆ. ಎಲ್ಲ ಸಮ್ಮೇಳನಗಳಂತೆ ಪೊಲೀಸ್ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ಸಹಕರಿಸುವುದಾಗಿ ಹೇಳಿದರು.
ಹಿರಿಯ ಸಾಹಿತಿ ಡಾ.ಶ್ರೀಶೈಲ್ ನಾಗರಾಳ ಮಾತನಾಡಿ, ಕನ್ನಡ ಅನ್ನದ ಭಾಷೆ. ಅದರ ಋಣ ತೀರಿಸಲು ಸೇವೆ ಮಾಡಬೇಕು. ಕನ್ನಡದ ಮಹನೀಯರ ಜನ್ಮ ನೀಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಬದುಕು-ಬರಹ ಹಾಗೂ ಸಾಧನೆಗಳು ಮುಂದಿನ ಪೀಳಿಗೆಗೆ ಶ್ರೀರಕ್ಷೆ. ಕನ್ನಡ ಭವನದ ನಿವೇಶನಕ್ಕಾಗಿ ಲಕ್ಷö್ಮಣರಾವ ಗೋಗಿ ಅವರು ಪಟ್ಟ ಶ್ರಮ ಸ್ಮರಣಾರ್ಹ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ-ವಿಮರ್ಶಕಿ ನಾಡೋಜ ಪ್ರೊ.ಕಮಲಾ ಹಂಪನಾ ಅವರ ನಿಧನಕ್ಕೆ ಜಿಲ್ಲಾ ಕಸಾಪ ದಿಂದ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು. ಯಾದಗಿರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಉತ್ತರಾದೇವಿ ಮಠಪತಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಧರ್ಮಣ್ಣ ಎಚ್.ಧನ್ನಿ, ರವೀಂದ್ರಕುಮಾರ ಭಂಟ್ನಳ್ಳಿ, ಸಿದ್ಧಲಿಂಗ ಬಾಳಿ, ಕಲ್ಯಾಣಕುಮಾರ ಶೀಲವಂತ, ಡಾ. ಸ್ವಾಮಿರಾವ ಕುಲಕರ್ಣಿ ಮಾತನಾಡಿದರು. ಲೇಖಕರಾದ ಪ್ರೊ. ನಾನಾಗೌಡ ಪಾಟೀಲ, ಪ್ರೊ. ಶಿವರಾಜ ಪಾಟೀಲ, ಕಮಲಮ್ಮ ಗೋಗಿ, ರತ್ನಕಲಾರೆಡ್ಡಿ ಮುನ್ನೂರ, ಡಾ.ವೀರೇಶ ಪ್ರಭುಲಿಂಗಯ್ಯ ಮಲ್ಲಾಪೂರ, ಬಾಬುರಾವ ಪಾಟೀಲ್, ಡಾ.ರೆಹಮಾನ್ ಪಟೇಲ್, ಗುರುಬಸಪ್ಪ ಎಸ್ ಸಜ್ಜನಶೆಟ್ಟಿ, ಸಂತೋಷ ಕುಡಳ್ಳಿ, ನಾಗಪ್ಪ ಎಂ ಸಜ್ಜನ್, ಸುರೇಶ ದೇಶಪಾಂಡೆ ಇತರರಿದ್ದರು.