

ಬಾಗಲಕೋಟೆ: ಹಣ, ಜಾತಿ ಹೆಸರಿನಲ್ಲಿ ಮತ ಕೇಳುವ ಬಿಜೆಪಿ, ಕಾಂಗ್ರೆಸ್ ಪಕ್ಷವು ಅನೇಕ ವರ್ಷಗಳ ಕಾಲ ರಾಜ್ಯ, ಕೇಂದ್ರದಲ್ಲಿ ಸರ್ಕಾರ ನಡೆಸಿವೆ. ಜನರ ಸಮಸ್ಯೆಗಳಿಗೆ ಪರಿಹರಿಸಲು ವಿಫಲವಾಗಿವೆ. ನಾಡಿನ ಸಮೃದ್ಧಿಗಾಗಿ, ಜನ ಸಾಮಾನ್ಯರ ಬದುಕು ಕೊಟ್ಟಿಡುವ ಜೆಡಿಎಸ್ ಪಕ್ಷ, ನಾಯಕರಿಗೆ ಮತ ನೀಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ನವನಗರದ ಕಲಾಭವನದಲ್ಲಿ ಭಾನುವಾರ ಜೆಡಿಎಸ್ ಜಿಲ್ಲಾ ಘಟಕದ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಹಾಗೂ ಜಿಲ್ಲಾ ಮಟ್ಟದ ಸಂಘಟನಾ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ನೂರಾರು ಭರವಸೆ ನೀಡುವ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ಈ ವರೆಗೆ ಬಡವರು, ಶ್ರೀಸಾಮಾನ್ಯರಿಗೆ ಉತ್ತಮ ಶಾಲೆ, ಆರೋಗ್ಯ ಕೇಂದ್ರ, ಕೃಷಿ, ನೀರಾವರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಶೂನ್ಯ. ಮಾಜಿ ಪ್ರಧಾನ ಮಂತ್ರಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ತಮಗೆ ಸಿಕ್ಕ ಅಲ್ಪ ಅವಽಯಲ್ಲಿ ಅಧಿಕಾರಿದಲ್ಲಿ ನಾಡಿನ ಜನರಿಗೆ ಹಲವಾರು ಯೋಜನೆ ನೀಡಿದ್ದಾರೆ ಎಂದರು.
ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದ ಕಾಂಗ್ರೆಸ್ ಕೃಷ್ಣಾ ಮೇಲ್ದಂಡೆ ಯೋಜನೆಗೆ ಯಾವ ಕೊಡುಗೆ ನೀಡಲಿಲ್ಲ. ಈ ಹಿಂದೆ ದೇವೇಗೌಡರು ಪ್ರಧಾನ ಮಂತ್ರಿ ಇದ್ದಾಗ ಕೃ.ಮೇ.ಯೋ ಸಾವಿರಾರು ಕೋಟಿ ರೂ. ನೀಡಿದರು. ಆಂಧ್ರಪ್ರದೇಶದ ಅಂದಿನ ಸಿಎಂ ಚಂದ್ರಬಾಬು ನಾಯ್ಡು ಬೆದರಿಕೆ ಬಗಲಿಲ್ಲ. ಪ್ರಧಾನಿ ಹುದ್ದೆ ರಾಜೀನಾಮೆ ನೀಡಿದರು. ರಾಜ್ಯದ ಜನತೆ ಒಂದು ಬಾರಿ ಅಧಿಕಾರ ನೀಡಿದರೆ ವಿಜಯಪುರ-ಬಾಗಲಕೋಟೆ ಜಿಲ್ಲೆಯ ರೈತರ ಭೂಮಿ ಯೋಗ್ಯ ಬೆಲೆ ನೀಡಿ ಪ್ರತಿ ಜಮೀನಿಗೂ ಐದು ವರ್ಷದಲ್ಲಿ ನೀರು ನೀಡುತ್ತೇವೆ. ಮತ್ತೆ ಎಸ್.ಎಂ.ಜಾಮದಾರ ಅವರನ್ನು ವಿಶೇಷ ಅಧಿಕಾರಿಯನ್ನಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ಸಾರಿ ಕುಮಾರಸ್ವಾಮಿ ಅವರು ಪಂಚ ರತ್ನ ಯೋಜನೆ ಹಾಕಿಕೊಂಡು ಮತ ಕೇಳುತ್ತಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹೈಟೆಕ್ ಆಸ್ಪತ್ರೆ ನಿರ್ಮಿಸಿ ೫೦ ಲಕ್ಷ ರೂ. ವರೆಗೆ ದೊಡ್ಡ ರೋಗಗಳಿಗೆ ಉಚಿತವಾಗಿ ಚಿಕಿತ್ಸೆ, ಪ್ರತಿಯೊಂದು ಹಳ್ಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸಿ ಬಡವರು, ರೈತರ ಮಕ್ಕಳು ಬಿಡಿಗಾಸು ನೀಡದೆ ಕನ್ನಡ, ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತೇವೆ. ಈ ಹಿಂದೆ ದೇವೇಗೌಡರು ಸಿಎಂ, ಗೋವಿಂದೆ ಗೌಡರ ಶಿಕ್ಷಣ ಮಂತ್ರಿ ಇದ್ದಾಗ ೧ ಲಕ್ಷ ಶಿಕ್ಷಕರನ್ನು ಭರ್ತಿ ಮಾಡಿದಂತೆ ಯಾವುದೇ ಭ್ರಷ್ಟಾಚಾರ, ಹಗರಣ ಇಲ್ಲದೆ ಸರ್ಕಾರಿ ಹುದ್ದೆಗಳನ್ನು ತುಂಬುತ್ತೇವೆ ಎಂದು ಘೋಷಣೆ ಮಾಡಿದರು.
ಮೋದಿಗೆ ಸಂಸಾರವಿಲ್ಲ ಬೆಲೆ ಏರಿಕೆ ಗೊತ್ತಾಗಲ್ಲ:
ಸಂಸಾರ ಮಾಡಿಕೊಂಡವರಿಗೆ ಮಾತ್ರ ಅಕ್ಕಿ, ಬೆಳೆ, ಹಾಲಿನ ಬೆಲೆ ಗೊತ್ತಾಗುತ್ತದೆ. ಆದರೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಸಂಸಾರವಿಲ್ಲ. ಹೀಗಾಗಿ ಬೆಲೆ ಏರಿಕೆ ಆಗುತ್ತಿದೆ. ಬಡವರ ಮಕ್ಕಳು ಹಾಲು ಕುಡಿಯದಂತಾಗಿದೆ ಪರಿಸ್ಥಿತಿ. ಅಷ್ಟರ ಮಟ್ಟಿಗೆ ಬೆಲೆ ಏರಿಕೆ ಆಗಿದೆ. ಈ ಮೊದಲು ಪ್ರತಿ ವರ್ಷವು ರೈತರಿಗೆ ಸಬ್ಸಿಡಿ ನೀಡಲಾಗುತ್ತಿತ್ತು. ಇದೀಗ ಏಳು ವರ್ಷಕ್ಕೆ ನಿಗದಿ ಮಾಡಲಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ, ಪ್ರಧಾನಿ ಮೋದಿ ಬೆಳೆ ಬೆಳೆಯುವುದು ಗೊತ್ತಿಲ್ಲ. ಹೀಗಾಗಿ ಕೃಷಿಕರ ಸಂಕಟ ಗೊತ್ತಾಗುತ್ತಿಲ್ಲ. ಇದೇ ಮೋದಿ ಬಂಡವಾಳ ಶಾಹಿಗಳ ೫ ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದರು. ರೈತರ ಸಾಲ ಒಂದು ರೂ. ಮನ್ನಾ ಮಾಡಲಿಲ್ಲ. ಕುಮಾರಸ್ವಾಮಿ ಕೇವಲ ೧೪ ತಿಂಗಳ ಅವಽಯಲ್ಲಿ ೨೫ ಸಾವಿರ ಕೋಟಿ ರೂ. ರೈತರ ಸಾಲ ಮನ್ನಾ ಮಾಡಿದರು. ಮುಂದಿನ ಸಾರಿ ಅಽಕಾರಕ್ಕೆ ಬಂದರೆ ವಸತಿ ಯೋಜನೆಗೆ ಮೂಲಕ ಪ್ರತಿಯೊಬ್ಬರಿಗೆ ೫ ಲಕ್ಷ ರೂ.ವರೆಗೆ ಮನೆ, ಸ್ತೀ ಶಕ್ತಿ ಸಂಘಗಳ ಸಾಲ ಮನ್ನಾ ನಿಶ್ಚಿತ ಎಂದರು.
ಮುಖಂಡರಾದ ಶ್ರೀನಿವಾಸ ಗೌಡರ, ರೇಣುಕಾ ಭಜಂತ್ರಿ, ಸಲೀಂ ಮೋಮಿನ, ಯಾಸೀನ ನದಾಫ, ಯಾಸೀನ ಮಿರ್ಜಿ, ಶಿವು ವಾಲ್ಮೀಕಿ, ಕೃಷ್ಣಾ ಪಾಟೀಲ, ಚಂದನಾ ಪೂಜಾರಿ, ಪ್ರಭುರಾಜ ಪಾಟೀಲ ಸೇರಿದಂತೆ ಇತರರು ಇದ್ದರು.