

ಬಾಗಲಕೋಟೆ: ದೇಶದ ಭದ್ರತೆಗೆ ಭಾರತೀಯ ಜನತಾ ಪಾರ್ಟಿ ಮುಖ್ಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ದೇಶ ಅಭಿವೃದ್ಧಿ ಹೊಂದಿದೆ, ರಾಜ್ಯದಲ್ಲೂ ಕೂಡಾ ನಾಡಿನ ಅಭಿವೃದ್ಧಿಗೆ ಬಿಜೆಪಿ ಅಗತ್ಯವಾಗಿದ್ದು ಯೋಗಿ ಮಾದರಿ ಸರಕಾರ ಬೇಕಾಗಿದೆ ಆ ನಿಟ್ಟಿನಲ್ಲಿ ಪಕ್ಷ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ನಗರದ ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಭಾನುವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತ ಕ್ಷೇತ್ರ ದಿಂದ ಹಮ್ಮಿಕೊಂಡ ನಗರ ಮಂಡಲ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಭದ್ರತೆ ಹಾಗೂ ಅಭಿವೃದ್ಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾರ್ಯ ಅರ್ಥಪೂರ್ಣವಾಗಿ ನಡೆದಿದ್ದು, ಕರ್ನಾಟಕದಲ್ಲೂ ಕೂಡಾ ಈ ಕಾಂಗ್ರೆಸ್ಸ್ ಸರಕಾರದ ಆಡಳಿತಕ್ಕೆ ಜನರು ಬೆಸತ್ತು ಹೋಗಿದ್ದಾರೆ, ರಾಜ್ಯದಲ್ಲೂ ಮತ್ತೊಮ್ಮೆ ಭಾರತೀಯ ಜನತಾ ಪಕ್ಷದ ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳು ಇವೆ, ಇಂದು ರಾಜ್ಯಕ್ಕೆ ಯೋಗಿ ಮಾದರಿ ಸರಕಾರ ಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಪಕ್ಷವನ್ನು ಸಂಘಟಿಸೋಣ, ಪಕ್ಷ ಯಾರ ಸೋತ್ತು ಅಲ್ಲ, ಲಕ್ಷಾಂತರ ಕಾರ್ಯಕರ್ತರ ಶ್ರಮದ ಫಲವಾಗಿದೆ, ಪಕ್ಷ ಬಿಟ್ಟು ಹೋದವರು ತಪ್ಪನ್ನು ಒಪ್ಪಿಕೊಂಡು ಬರುವವರಿಗೆ ಸ್ವಾಗತವಿದೆ, ಎಲ್ಲ ಪದಾಧಿಕಾರಿಗಳು ದಿನನಿತ್ಯ ತಮ್ಮ ಕೆಲಸದ ಜವಾಬ್ದಾರಿಗಳ ಜೊತೆಗೆ ದಿನಕ್ಕೆ ಒಂದು ಗಂಟೆ ಪಕ್ಷಕ್ಕೆ ಮೀಸಲಿಟ್ಟು ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಅವರು ಭಾರತ ಮಾತಾ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸಿ ಉದ್ಘಾಟನೆ ಮಾಡಿ, ಮಾತನಾಡಿದ ಅವರು ಬಾಗಲಕೋಟೆಯಲ್ಲಿ ನಡೆದಿರುವ ಈ ಪದಗ್ರಹಣ ಸಮಾರಂಭ ಸರ್ವವ್ಯಾಪಿ ಸರ್ವ ಸ್ಪರ್ಶಿಯಾಗಿದ್ದು, ನಗರದ ಮೂಲೆ ಮೂಲೆಗಳನ್ನು ಸಂಪರ್ಕಿಸಿ, ಪ್ರತಿ ಸಮಾಜಕ್ಕೂ ಜವಾಬ್ದಾರಿಯನ್ನು ಕೊಟ್ಟಿರುವುದು ಶ್ಲಾಘನೀಯ. ಇದು ರಾಜ್ಯಕ್ಕೆ ಬಾಗಲಕೋಟೆ ಒಂದು ಆದರ್ಶವಾಗಿದೆ ಎಂದರು.
ಅದ್ಯಕ್ಷತೆ ವಹಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಾಗೌಡ ಪಾಟೀಲ ಮಾತನಾಡಿ, ಪಕ್ಷದ ಪುನರಚನೆ ಕಾರ್ಯ ಪಕ್ಷದ ಸಂವಿಧಾನದ ಅಡಿಯೊಳಗೆ ನಿರಂತರವಾಗಿ ನಡೆಯುವ ಕಾರ್ಯವಾಗಿದ್ದು ಆ ನಿಟ್ಟಿನಲ್ಲಿ ಬಾಗಲಕೋಟೆ ಮತ ಕ್ಷೇತ್ರದ ನಗರ ಹಾಗೂ ಗ್ರಾಮೀಣ ಮಂಡಲ ಕಾರ್ಯ ಯಶಸ್ವಿಯಾಗಿವೆ,ಪಕ್ಷವನ್ನು ಸಂಘಟಿಸುವ ಕಾರ್ಯ ನೂತನ ಪದಾಧಿಕಾರಿಗಳ ಮೇಲಿದೆ, ಅಭಿವೃಧ್ಧಿ ವಿಷಯದಲ್ಲಿ ಬಾಗಲಕೋಟೆಯ ವೀರಣ್ಣ ಚರಂತಿಮಠರು ಎಲ್ಲರಿಗೂ ಮಾದರಿ, ರಾಜ್ಯದಲ್ಲಿ ಯಾರೆ ಕೇಳಿದರು ಬಾಗಲಕೋಟೆ ನೋಡ ಬನ್ನಿ ಎಂದು ಹೇಳುತ್ತಾರೆ, ಹಿಂದಿನ ಚುನಾವಣೆಯಲ್ಲಿ ನಮ್ಮ ಪಕ್ಷದ ಗೊಂದಲ ಹಾಗೂ ಗ್ಯಾರಂಟಿಗಳಿಂದ ಸೊಲಾಗಿತ್ತು, ಮುಂದಿನ ದಿನಗಳಲ್ಲಿ ಬಾಗಲಕೋಟೆ ಎಲ್ಲ ಕ್ಷೇತ್ರದಲ್ಲಿಯೂ ಬಿಜೆಪಿ ವಿಜಯವನ್ನು ಸಾಧಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ, ಆ ನಿಟ್ಟಿನಲ್ಲಿ ಎಲ್ಲರೂ ಕಾರ್ಯೊನ್ಮುಖರಾಗೋಣ ಎಂದರು.
ಪದಗ್ರಹಣ: ನಗರ ಮಂಡಲ, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರ, ಬೂತ ಅಧ್ಯಕ್ಷರ, ಹಾಗೂ ವಿವಿಧ ಪ್ರಕೋಷ್ಠಗಳ, ಮತ್ತು ನಗರ ಮಂಡಲದಿಂದ ಜಿಲ್ಲೆಗೆ ನಿಯುಕ್ತಗೊಂಡ ಪದಾಧಿಕಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ಪದಾಧಿಕಾರಿಗಳಿಗೆ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪಕ್ಷದ ಶಾಲ ಹಾಕಿ ಜವಾಬ್ದಾರಿಗಳನ್ನು ನೀಡಲಾಯಿತು.
ಕಾರ್ಯಕ್ರಮದ ವೇದಿಕೆ ಮೇಲೆ ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಸಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಬಸವರಾಜ ಯಂಕಂಚಿ, ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಸತ್ಯನಾರಾಯಣ ಹೇಮಾದ್ರಿ, ಸುರೇಶ ಮಜ್ಜಗಿ, ಹೇಮಂತ ಸಿಮೀಕೇರಿ,ಗಣೇಶ ಲಗಳಿ ಇದ್ದರು, ಉಮೇಶ ಹಂಚಿನಾಳ,ಶ್ರೀಧರ ನಾಗರಬೆಟ್ಟ, ನೀಲಪ್ಪ ಬೇವೂರ, ಚಂದ್ರು ಸರೂರ,ಮಹಾಂತೇಶ ಶೆಟ್ಟರ,ಡಾ.ಎಂ.ಎಸ್. ದಡ್ಡೆನ್ನವರ, ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಶ್ರೀಕಾಂತ ಪತ್ತಾರ, ಪ್ರಭು ಹಡಗಲಿ ಸೇರಿದಂತೆ ಪಕ್ಷದ ಮುಖಂಡರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.