ನಾಡದೋಣಿ ಇಂಜಿನ್ ಕದ್ದವರ ಬಂಧನ

7KMT1
Published on

ಕುಮಟಾ: ಇಲ್ಲಿನ ಶಶಿಹಿತ್ತಲ ಮೀನುಗಾರರೊಬ್ಬರ ನಾಡದೋಣಿಯ ಇಂಜಿನ್ ಕದ್ದ ಆರೋಪಿಗಳಿಬ್ಬರನ್ನು ಮಾಲು ಸಮೇತ ಕುಮಟಾ ಪೊಲೀಸರು ಬಂಧಿಸಿದ್ದಾರೆ. ಶಶಿಹಿತ್ತಲದ ರವಿ ನಾರಾಯಣ ಹರಿಕಂತ್ರ ಹಾಗೂ ಕಾಗಾಲ ಹಿಣಿಯ ಸಂದೀಪ್ ಹರಿಕಂತ್ರ ಬಂಧಿತರು.

ಶಶಿಹಿತ್ತಲದ ರಾಘವೇಂದ್ರ ಸುರೇಶ ಹರಿಕಂತ್ರ ಅವರ ನಾಡದೋಣಿಯ ಸುಮಾರು 1.25 ಲಕ್ಷ ರೂ ಮೌಲ್ಯದ ಯಮಹಾ ಕಂಪನಿಯ ಇಂಜಿನ್ ನ. 4ರಂದು ರಾತ್ರಿ ಕಳುವಾಗಿತ್ತು. ಈ ಬಗ್ಗೆ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡ ಕುಮಟಾ ಪೊಲೀಸರು ಕಳುವಾದ ಇಂಜಿನ್ ಪತ್ತೆ ಹಚ್ಚಿ, ಅರೋಪಿಗಳಿಬ್ಬರ ಸಹಿತ ಕಳುವಿಗೆ ಬಳಸಿದ ಓಮಿನಿ ಕಾರನ್ನೂ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net