

ಬಾಗಲಕೋಟೆ: ನಾಟಕ ಮತ್ತು ಕಲೆ ಶಿಕ್ಷಣದಲ್ಲಿ ಶ್ರೀಮಂತಿಕೆಯ ಪರಂಪರೆ ಹೊಂದಿದ್ದು, ಪ್ರಾಚೀನ ನಾಗರಿಕತೆಗಳಿಂದಲೂ ಇವುಗಳು ನೈತಿಕ ಪಾಠಗಳು ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಸಹಕಾರಿಯಾಗಿವೆ ಎಂದು ಪ್ರಾಚಾರ್ಯ ಡಾ. ಅರುಣಕುಮಾರ ಗಾಳಿ ಹೇಳಿದರು.
ನವನಗರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಹಂಪಿ ಕನ್ನಡ ವಿಶ್ವವಿದ್ಯಾಲಯ ನಾಟಕ ವಿಭಾಗ, ಗುಳೆದಗುಡ್ಡದ ರಾಷ್ಟಿçÃಯ ಸಂಶೋಧನಾ ವೇದಿಕೆ ಸಹಯೋಗದಲ್ಲಿ ಕನ್ನಡ ನಾಟಕಗಳ ವಿಭಿನ್ನ ನೆಲೆಗಳು ಕುರಿತು ಒಂದು ದಿನದ ರಾಜ್ಯಮಟ್ಟದ ಸಂಶೋಧನಾ ಕಮ್ಮಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಟಕಗಳು ಶತಮಾನಗಳಿಂದ ಸಾಮಾಜಿಕ ಬದಾಲಾವಣೆಗಳನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಕತೆ ಹೇಳುವಿಕೆ ಮತ್ತು ದೃಶ್ಯ ಅಭಿವ್ಯಕ್ತಿಯನ್ನು ಒಳಗೊಂಡAತೆ ವಿಕಸನಗೊಂಡಿದೆ. ಇಂದು ನಾಟಕಗಳು ವಿದ್ಯಾರ್ಥಿಗಳಿಗೆ ಸೃಜನಶೀಲತೆ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುವಲ್ಲಿ ಅವಿಭಾಜ್ಯ ಅಂಗವಾಗಿದ್ದು, ನಾಟಕಗಳು ಅನುಭವದ ಕಲಿಕೆಯ ಮೂಲಾಧಾರವಾಗಿವೆ ಎಂದು ತಿಳಿಸಿದರು.
ಸಾಹಿತ್ಯ ಅಕಾಡೆಮಿ ಸದಸ್ಯ ಮಹಾದೇವ ಬಸರಕೊಡ ಮಾತನಾಡಿ, ಕಲೆ ಮತ್ತು ನಾಟಕದ ಮೂಲಕ ವೈವಿಧ್ಯಮಯ ಸಂಪ್ರದಾಯಗಳು, ಇತಿಹಾಸ, ದೃಷ್ಟಿಕೋನಗಳ ಬಗೆಗೆ ಕಲಿಯುವುದು ಸಹಾನೂಭೂತಿ ಮತ್ತು ಜಾಗತಿಕ ಜಾಗೃತಿ ಬೆಳೆಸುತ್ತದೆ. ಇಂತಹ ಜಾಗೃತಿಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ ಸಂಶೋಧನಾ ಕಮ್ಮಟ ಅರ್ಥ ಪೂರ್ಣತೆ ಪಡೆದುಕೊಂಡಿದೆ.
ರಂಗಕರ್ಮಿ ಮಲ್ಲಿಕಾರ್ಜುನ ಸಜ್ಜನ ಕಮ್ಮಟದ ಅನುಭವ ಕುರಿತು ಮಾತನಾಡಿ, ನಾಟಕ ಮತ್ತು ಕಲೆಗಳು ಪಠ್ಯೇತರ ಚಟುವಟಿಕೆಗಳಲ್ಲ ಬದಲಾಗಿ ಸಮಗ್ರ ಶಿಕ್ಷಣ ಅಗತ್ಯ ಅಂಶಗಳಾಗಿದ್ದು, ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಇಂತಹ ರಾಜ್ಯ ಮಟ್ಟದ ಕಮ್ಮಟ ಎಲ್ಲರಿಗೂ ಮಾದರಿಯಾಗಿದೆ ಎಂದರು.
ಹಂಪಿ ವಿಶ್ವವಿದ್ಯಾಲಯದ ನಾಟಕ ವಿಭಾಗದ ಮುಖ್ಯಸ್ಥ ಡಾ.ವೀರೇಶ ಬಡಿಗೇರ, ರಾಷ್ಟಿçÃಯ ಸಂಶೋಧನಾ ವೇದಿಕೆ ಗೌರವಾಧ್ಯಕ್ಷ ಡಾ.ಸಂಗಮೇಶ ಕಲ್ಯಾಣಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ.ಜಿ.ಜಿ.ಹಿರೇಮಠ ಉಪಸ್ಥಿತರಿದ್ದರು. ಪ್ರೊ.ಪರಸಪ್ಪ ತಳವಾರ ಪ್ರಾರ್ಥಿಸಿದರು. ಡಾ.ಸುಮಂಗಲಾ ಮೇಟಿ ಸ್ವಾಗತಿಸಿದರು. ಪ್ರೊ.ಸಂಗಮೇಶ ಬ್ಯಾಳಿ ನಿರೂಪಿಸಿದರು. ಡಾ.ಚಂದ್ರಶೇಖರ ಕಾಳನ್ನವರ ವಂದಿಸಿದರು.