ನಾಗರ ಪಂಚಮಿ ಸಡಗರ

aldur panchami
ನಾಗರ ಪಂಚಮಿ ಪ್ರಯುಕ್ತ ಆಲ್ದೂರು ಸಮೀಪದ ಹಳಿಯೂರು ಗ್ರಾಮದ ಕಲ್ಲೇಶ್ವರಸ್ವಾಮಿ ದೇವಸ್ಥಾನದ ಬಳಿಯ ನಾಗರಕಲ್ಲಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
Published on

ಆಲ್ದೂರು: ಪಟ್ಟಣದಲ್ಲಿ ಸೋಮವಾರ ನಾಗರ ಪಂಚಮಿಯನ್ನು ಜನರು ಶ್ರದ್ಧಾಭಕ್ತಿಯಿಂದ ಆಚರಿಸಿದರು.

ಬೆಳಗ್ಗೆಯೇ ಮನೆಯಲ್ಲಿ ಪೂಜೆ ನೆರವೇರಿಸಿ ಸಮೀಪದ ದೇವಸ್ಥಾನಗಳಲ್ಲಿ ನಾಗರ ಕಲ್ಲುಗಳಿಗೆ ಹಾಲೆರೆದು ಅರಿಶಿನ, ಅಡಕೆ ಸಿಂಗಾರ ಅರ್ಪಿಸಿ ಪೂಜೆ ಸಲ್ಲಿಸಿದರು. ಹಳಿಯೂರಿನ ಕಲ್ಲೇಶ್ವರ ಸ್ವಾಮಿ ದೇವಸ್ಥಾನ, ಹವ್ವಳ್ಳಿಯ ಅಮೃತೇಶ್ವರ ಸ್ವಾಮಿ ದೇವಸ್ಥಾನಗಳಲ್ಲಿ ನಾಗರಕಲ್ಲಿಗೆ ವಿಶೇಷಪೂಜೆ ಸಲ್ಲಿಸಲಾಯಿತು. ಸುತ್ತಲಿನ ನೂರಾರು ಭಕ್ತರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ನಾಗರ ಪಂಚಮಿಯಂದು ನಾಗದೇವರನ್ನು ಪೂಜಿಸಿದರೆ ಕಾಳಸರ್ಪ ದೋಷಗಳಿಂದ ಮುಕ್ತಿ ದೊರೆಯುತ್ತದೆ. ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂಬ ನಂಬಿಕೆ ಇದೆ. ಕೆಲವು ಸುಮಂಗಲಿಯರು ಈ ಹಬ್ಬವನ್ನು ವೃತದಂತೆಯೂ ಆಚರಿಸುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net