

ಬಾಗಲಕೋಟೆ: ವಾತಾರಣದಲ್ಲಿ ಬದಲಾವಣೆ ಹಿನ್ನಲೆಯಲ್ಲಿ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್‌ನ ನವೋದಯ ಶಾಲೆ ಮಕ್ಕಳಲ್ಲಿ ಎರಡು ದಿನಗಳಿಂದ ಜ್ವರ, ನೆಗಡಿ, ಕೆಮ್ಮು, ಸುಸ್ತು ಕಾಣಿಸಿಕೊಂಡಿದ್ದು, ಮೂರು ದಿನ ೬ ರಿಂದ ೯ ನೇ ತರಗತಿ ಮಕ್ಕಳಿಗೆ ರಜೆ ನೀಡಿ, ಆರೋಗ್ಯ ತಪಾಸಣೆ, ಚಿಕಿತ್ಸೆ ಕೊಟ್ಟು ಮನೆಗೆ ಕಳುಹಿಸಲಾಗಿದೆ.
ಎರಡು ದಿನಗಳ ಹಿಂದೆ ಕೆಲ ಮಕ್ಕಳಲ್ಲಿ ಜ್ವರ, ಸುಸ್ತು ಕಾಣಿಸಿಕೊಂಡಿತ್ತು. ಮಂಗಳವಾರ ಮತ್ತಷ್ಟು ಮಕ್ಕಳಲ್ಲಿ ಕಾಣಿಸಿದ್ದರಿಂದ ಬುಧವಾರ ವೈದ್ಯರ ತಂಡ ಶಾಲೆಗೆ ಆಗಮಿಸಿ ಮಕ್ಕಳಿಗೆ ಚಿಕಿತ್ಸೆ ನೀಡಿದ್ದು, ಸದ್ಯ ತಾತ್ಕಾಲಿಕ ಚಿಕಿತ್ಸಾಲಯವನ್ನು ತೆರೆಯಲಾಗಿದೆ.
ಬುಧವಾರ ಶಾಲೆಗೆ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಅವರು ಸಹ ಶಾಲೆಗೆ ಭೇಟಿ ಮಕ್ಕಳ ಆರೋಗ್ಯ ವಿಚಾರಿಸಿ, ವೈದ್ಯರು ಹಾಗೂ ಅಲ್ಲಿನ ಸಿಬ್ಬಂದಿ ಜೊತೆ ಚರ್ಚಿಸಿದರು. ಮೊದಲು ಸೋಮವಾರ ೬೩ ಮಕ್ಕಳಲ್ಲಿ ಜ್ವರ ಕಾಣಿಸಿದ್ದು, ಮಂಗಳವಾರ ಮತ್ತೆ ೮೦ ಮಕ್ಕಳಲ್ಲಿ ಜ್ವರ ಕಾಣಿಸಿತ್ತು. ಆದರೆ, ಬುಧವಾರ ೧೩ ಮಕ್ಕಳಲ್ಲಿ ಜ್ವರ, ಸುಸ್ತು ಕಂಡು ಬಂದಿದ್ದು, ಬಾದಾಮಿ ತಾಲೂಕು ಆರೋಗ್ಯ ಅಽಕಾರಿಗಳು, ನೋಡಲ್ ಅಽಕಾರಿಗಳು ಹಾಗೂ ವೈದ್ಯರು ಸ್ಥಳದಲ್ಲೆ ಇದ್ದು, ಮಕ್ಕಳಿಗೆ ಚಿಕಿತ್ಸೆ ನೀಡಿದ್ದಾರೆ. ಯಾವುದೇ ತೊಂದರೆ ಇಲ್ಲ ಎಂದು ಡಿಎಚ್‌ಒ ಡಾ.ಮಂಜುನಾಥ ಡಿ ಅವರು ತಿಳಿಸಿದರು.