ನವನೀತ ಚೋರನ ಜನ್ಮಾಷ್ಟಮಿ ಸಂಭ್ರಮ

bkt-26-9
ಬಾಗಲಕೋಟೆ ನಗರದ ಸೆಕ್ಟರ್ ನಂಬರ್ ೮ ರಲ್ಲಿರುವ ಶ್ರೀಕೃಷ್ಣ ಮಠದಲ್ಲಿ ಶ್ರೀಕೃಷ್ಣ ದೇವರಿಗೆ ವಿಶೇಷ ಅಲಂಕಾರ.
Published on

ಬಾಗಲಕೋಟೆ: ನವನೀತ ಚೋರ, ಮುದ್ದು ಗೋಪಾಲ ಶ್ರೀಕೃಷ್ಣ ಜನ್ಮಾಷ್ಟಮಿ ಸಡಗರ, ಸಂಭ್ರಮ ನವನಗರದ ಶ್ರೀಕೃಷ್ಣ ಮಠದಲ್ಲಿ ಮುಗಿಲು ಮುಟ್ಟಿತ್ತು. ನೂರಾರು ಭಕ್ತರಿಂದ ಅರ್ಘ್ಯ ಪ್ರಧಾನ, ಶ್ರೀಕೃಷ್ಣನಿಗೆ ಬೆಣ್ಣೆಯ ನೈವಿದ್ಯ ಸಮರ್ಪಣೆ ಮಾಡಲಾಯಿತು.

ಸೋಮವಾರ ನವನಗರದ ೮ನೇ ಕ್ರಾಸ್‌ನಲ್ಲಿರುವ ಅಖಿಲ ಭಾರತ ಮಾಧ್ವ ಮಹಾ ಮಂಡಳದ ಶ್ರೀಕೃಷ್ಣ ಮಠದಲ್ಲಿ ಸಂಭ್ರಮದ ವಾತಾವರಣ ಕಂಡು ಬಂದಿತು. ನೂರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಕೃಷ್ಣ ಜನ್ಮಾಷ್ಟಮಿಯ ಸಡಗರ ಕಣ್ಣುತುಂಬಿಕೊಂಡರು. ಅಲ್ಲದೆ ನವನಗರದ ೧೮ನೇ ಕ್ರಾಸನಲ್ಲಿರುವ ರಾಧಾಕೃಷ್ಣ ಮಂದಿರ, ವಿದ್ಯಾಗಿರಿ ಕ್ರಾಸನಲ್ಲಿರುವ ಬಾಲಾಜಿ ಮಂದಿರ, ಜನ್ಮಾಷ್ಟಮಿ ಸಂಭ್ರಮ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net