ಸಂಬಂಧಿಕರಿಂದಲೇ ನಡೆಯಿತು ಯುವಕನ ಕೊಲೆ...!

IMG-20220731-WA0014
Published on

ನವೀನ, ಕೊಲೆ, ಕನವಳ್ಳಿ, ಪೊಲೀಸರು, ಸಂಬಂಧಿಕರೆ, Navina, murder, Kanavalli, police, relatives,

ಹಾವೇರಿ: ಕಳೆದ 3 ದಿನಗಳ ಹಿಂದೆ ಯುವಕನನ್ನು ಕೊಲೆ ಮಾಡಿ ಶವ ಬೀಸಾಕಿದ ಪ್ರಕರಣ ವನ್ನು ಪೊಲೀಸರು ಮೂರೇ ದಿನದಲ್ಲಿ ಬೇಧಿಸಿದ್ದಾರೆ.

ಹಡಗಲಿಯ ನವೀನ ರಾಠೋಡ (26) ಎಂಬಾತನನ್ನು ಕೊಲೆ ಮಾಡಿ ತಾಲೂಕಿನ ಕನವಳ್ಳಿ ಶಿಬಾರದ ಬಳಿ ಬಿಸಾಕಲಾಗಿತ್ತು. 


ಆತನ ಮೊಬೈಲ್ ಫೋನ್ ಕರೆ ಹಾಗೂ ಓಡಾಡಿದ ಸಿಸಿ ಕ್ಯಾಮರಾಗಳ ದೃಶ್ಯಾವಳಿ ಆಧರಿಸಿ ತನಿಖೆ ನಡೆಸಿದ ಪೊಲೀಸರಿಗೆ ಆತನನ್ನು ಸಂಬಂಧಿಕರೆ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.‌ ಸಂಜೆ ವೇಳೆಗೆ ಕೊಲೆ ಹಿಂದಿನ ರಹಸ್ಯ ಸೇರಿ ಸಮಗ್ರ ಮಾಹಿತಿ ಬಿಚ್ಚಿಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net