ನವ ಭಾರತ ನಿರ್ಮಾಣಕ್ಕೆ ಮೊದಲ ಆದ್ಯತೆ

15arsph3ep
Published on

ಅರಸೀಕೆರೆ: ದೇಶವನ್ನು ಪಗ್ರತಿ ಪಥದಲ್ಲಿ ಕೊಂಡೊಯ್ಯಲು ನವ ಹಾಗೂ ನಯ ಭಾರತ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಬೇಕು ಎಂದು ವಿವೇಕಾನಂದ ಬಿ.ಇಡಿ ಕಾಲೇಜು ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಕುಡವಕ್ಕಲಗಿ ಹೇಳಿದರು.

ನಗರ ವಿವೇಕಾನಂದ ಶಿಕ್ಷಣ ಕಾಲೇಜು ಆವರಣದಲ್ಲಿ ಶುಕ್ರವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಸ್ವಾತಂತ್ರ್ಯ ತಂದುಕೊಡಲು ನಡೆದ ಹೋರಾಟ, ಬಲಿದಾನಗಳಿಗೆ ಲೆಕ್ಕವಿಲ್ಲ. ಭಗತ್‌ಸಿಂಗ್, ಮದನಲಾಲ್ ದಿಂಗ್ರಾ, ಚಂದ್ರಶೇಖರ್ ಆಜಾದ್ ಸೇರಿದಂತೆ ಹಲವು ಯುವಕು ಬಾಳಿ ಬದುಕಬೇಕಾದ ಕಾಲಘಟ್ಟದಲ್ಲಿ ದೇಶಕ್ಕಾಗಿ ಪ್ರಾಣ ಸಮರ್ಪಿಸಿದ್ದಾರೆ. ಬ್ರಿಟಿಷರಿಂದ ದೇಶ ವಿಮೋಚನೆಯಾಗಿ 79 ವರ್ಷ ಪೂರೈಸಿದ್ದು ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗುವ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ನಯ ಹಾಗೂ ನವ ಭಾರತದ ನಿರ್ಮಾಣ ಯುವಜನರನ್ನು ಅವಲಂಬಿಸಿದೆ ಎಂದರು.

ಪ್ರಾಧ್ಯಾಪಕಿ ಡಾ.ಮಾಲಿನಿ, ಡಾ.ವಿಜಯ್ ಎಸ್.ಅಗಡಿ, ಡಾ.ಬಸವರಾಜು, ಶೇಖರ್, ಶಶಿಧರ್, ವಿಜಯಕುಮಾರ್, ರೇಖಾ, ಕಾಲೇಜು ಸಿಬ್ಬಂದಿ, ಪ್ರಶಿಕ್ಷಣಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net