

ಬಿಡದಿ : ನಲ್ಲಿಗುಡ್ಡೆ ಕೆರೆಯ ಕಾಲುವೆ ಬಳಿ ಭಾನುವಾರ ದುಷ್ಕರ್ಮಿಗಳು ಕಸದ ಮೂಟೆ ಸುರಿದಿದ್ದಾರೆ.
ನೀರು ಹರಿಯುವ ಕಾಲುವೆ ಪಕ್ಕದಲ್ಲಿ ರಾತ್ರಿ ವೇಳೆ ಲೋಡ್‌ಗಟ್ಟಲೆ ಕಸದ ಮೂಟೆ ಬಿಸಾಡಿದ್ದು, ಕಾರ್ಖಾನೆಯಿಂದ ನಿಷೇಧಿತ ಪ್ಲಾಸ್ಟಿಕ್, ರಬ್ಬರ್ ಪೀಸ್, ಥರ್ಮಕೋಲ್ ತ್ಯಾಜ್ಯವನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಬಿಸಾಡಿದ್ದಾರೆ. ಕೆಲವೊಂದು ಮೂಟೆಗಳು ಭತ್ತದ ಗದ್ದೆಗಳಲ್ಲಿ ಬಿದ್ದಿವೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕ್ರಮವಹಿಸಿ ದುರುಳರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕೆಂದು ಪರಿಸರ ಪ್ರೇಮಿ ಕೆಂಚನಕುಪ್ಪೆ ಸುರೇಶ್ ಆಗ್ರಹಿಸಿದ್ದಾರೆ.