ನರೇಗಾ ದುಡಿಯೋಣ ಬಾ ಅಭಿಯಾನ

Narega
Published on

ಕಲಬುರಗಿ: ನಂದೂರು (ಕೆ) ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದೂರು (ಕೆ) ಗ್ರಾಮದಲ್ಲಿ ತಾಪಂ ಐಇಸಿ ಸಂಯೋಜಕ ಮೋಸಿನ್​ ಖಾನ್​ ಅವರು ನರೇಗಾ ಯೋಜನೆಯಡಿ ದುಡಿಯೋಣ ಬಾ ಅಭಿಯಾನ ಕುರಿತು ಬುಧವಾರ ಮಾಹಿತಿ ನೀಡಿದರು. ದುಡಿಯೋಣ ಬಾ ಅಭಿಯಾನದಡಿ ೬೭ ಜನರಿಗೆ ನಮೂನೆ ನಂಬರ್​&೬ನ್ನು, ೧೭ ಜನರ ಉದ್ಯೋಗ ಚೀಟಿ ನವೀಕರಣ ಹಾಗೂ ೬೫ ಹೊಸ ಉದ್ಯೋಗ ಚೀಟಿ ನೀಡಲಾಯಿತು. ವ್ಯಕ್ತಿಗತ ಕಾಮಗಾರಿ, ಕೃಷಿ ಹೊಂಡ, ೇತ್ರದ ದನದ ದೊಡ್ಡಿ, ಕುರಿದೊಡ್ಡಿ, ಸಮುದಾಯ ಆಧಾರಿತ, ನಮ್ಮ ಹೊಲ ನಮ್ಮ ದಾರಿ, ಆಟದ ಮೈದಾನ, ಶಾಲೆಯ ಕಾಂಪೌಂಡ್​ ವಾಲ್​ ಕಾಮಗಾರಿ ರ‍್ಜಿ ಪಡೆಯಲಾಯಿತು. ಕೂಲಿ ಕರ‍್ಮಿಕರು ಪಿಎಂಜೆಜೆವೈ ಹಾಗೂ ಪಿಎಂಎಸ್​ಬಿವೈ ಯೋಜನೆಗಳಡಿ ವಿಮೆ ಮಾಡಿಕೊಳ್ಳಬೇಕು. ಕೂಲಿ ಮೊತ್ತ ೩೭೦ ರೂ.ಗೆ ಹೆಚ್ಚಿಸಲಾಗಿದ್ದು, ಎಲ್ಲರೂ ನಿಗದಿಪಡಿಸಿದ ಅಳತೆಗನುಗುಣವಾಗಿ ಕೆಲಸ ನರ‍್ವಹಿಸಬೇಕು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net