

ತಿ.ನರಸೀಪುರ: ತಾಲೂಕಿನ ನರಗ್ಯಾತನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಕುಮಾರಸ್ವಾಮಿ ನೇತೃತ್ವದ ತಂಡ ಮೇಲುಗೈ ಸಾಧಿಸಿದೆ.
ಕೃಷಿ ಪತ್ತಿನ ಸಹಕಾರ ಸಂಘದ ಒಟ್ಟು 12 ನಿರ್ದೇಶಕರ ಆಯ್ಕೆಗಾಗಿ ಸಂಘದ ಕಚೇರಿಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ತಾಪಂ ಮಾಜಿ ಅಧ್ಯಕ್ಷ ಕುಮಾರಸ್ವಾಮಿ ಹಾಗೂ ಡೇರಿ ಅಧ್ಯಕ್ಷ ಗುರುಮೂರ್ತಿ ತಂಡದ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಕುಮಾರಸ್ವಾಮಿ ನೇತೃತ್ವದ ತಂಡ 8 ಸ್ಥಾನಗಳಲ್ಲಿ ಗೆದ್ದರೆ, ಡೇರಿ ಗುರುಮೂರ್ತಿ ತಂಡ ಕೇವಲ ಎರಡು ಸ್ಥಾನ ಗೆದ್ದಿತು. ಒಬ್ಬ ಅಭ್ಯರ್ಥಿ ಅವಿರೋಧವಾಗಿ, ಮತ್ತೊಬ್ಬ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.
ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಎಂ.ಕುಮಾರಸ್ವಾಮಿ(319), ನಾಗೇಶ(246), ಕೆ.ವಿ.ರುದ್ರಸ್ವಾಮಿ(220), ಕೆಂಪಮಣಿ(241), ಮುದ್ದಯ್ಯ(164), ಬಸವರಾಜಪ್ಪ(282) ಶಿವಮ್ಮ(208) ಹಾಗೂ ಮಹದೇವಮ್ಮ157 ಮತ ಪಡೆದು ಗೆಲುವು ಸಾಧಿಸಿದರೆ, ಜೆ.ಎನ್.ಗುರುಮೂರ್ತಿ ಬಣದಿಂದ ಜೆ.ಎನ್.ಗುರುಮೂರ್ತಿ(251) ಹಾಗೂ ಪ್ರೇಮಾ (257) ಇಬ್ಬರು ಮಾತ್ರ ಗೆಲುವು ಸಾಧಿಸಿದರು. ಎಂ.ಪುಟ್ಟಸ್ವಾಮಿ 291 ಮತ ಪಡೆದು ಸ್ವತಂತ್ರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದರೆ, ಸಾಲಗಾರರಲ್ಲದ ಕ್ಷೇತ್ರದಿಂದ ನರಗ್ಯಾತನಹಳ್ಳಿ ಗುರುಸ್ವಾಮಿ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಜಿ.ಪ್ರೇಮಾ ಕಾರ್ಯನಿರ್ವಹಿಸಿದರು. ಕೋಣಗಳ್ಳಿ ಆನಂದ, ನಾಗರಾಜು, ರೈತ ಸಂಘದ ತಾಲೂಕ ಅಧ್ಯಕ್ಷ ಕರೋಹಟ್ಟಿ ಕುಮಾರಸ್ವಾಮಿ, ಚಿದರವಳ್ಳಿ ನವೀನ, ಮಹೇಶ, ಷಣ್ಮುಖಸ್ವಾಮಿ, ರಾಜು, ಸತೀಶ, ಚಂದ್ರಪ್ಪ, ಬಸವಣ್ಣ, ಬಸವಣ್ಣ, ಸಿದ್ದಯ್ಯ, ನಂಜಯ್ಯ, ಜ.ಸಿದ್ದಯ್ಯ, ನಿಂಗರಾಜು, ರೈತ ಸಂಘದ ಶಂಕರ, ನಾಗಲಗೆರೆ ಶಾಂತರಾಜು, ಮರಿಜೋಗಿ, ಮಹದೇವಸ್ವಾಮಿ, ಮುಡುಕುನಪುರ ಮಹದೇವಪ್ಪ, ಬಸವಲಿಂಗಪ್ಪ, ಎಚ್.ಸತೀಶ, ಸತೀಶ, ಕಜ್ಜಿ ಹುಂಡಿ ಗುರುಮಲ್ಲಪ್ಪ, ಪಿಗ್ಮಿ ಮಹದೇವಸ್ವಾಮಿ, ಪರಶಿವಮೂರ್ತಿ, ಗುರುಪಾದ ಸ್ವಾಮಿ, ಕೋಣಗಳ್ಳಿ ಬಸವಣ್ಣ, ರಾಜಪ್ಪ, ಮಹೇಶ, ಮಲ್ಲೇಶ, ಬಸವರಾಜಪ್ಪ, ಮಹೇಶ್, ಮಾದೇಶ, ಶಿವು, ಮಲ್ಲೇಶ್, ಶಿವು ಇದ್ದರು.