

ಬಾಗಲಕೋಟೆ: ಮಕ್ಕಳನ್ನು ಶಾಲೆ ಕಳುಹಿಸಿ ಫಿ ತುಂಬಿದರೆ ಸಾಲದು. ಅವರಲ್ಲಿ ನಮ್ಮ ಸನಾತನ ಧರ್ಮದ ಆಳವಾದ ಜ್ಞಾನ, ಮೂಲ ಸತ್ವ ತಿಳಿಸಬೇಕು. ನಮ್ಮ ಧರ್ಮ, ದೇವರು, ದೇಶಕ್ಕಾಗಿ ಪ್ರತಿಯೊಬ್ಬರು ಪ್ರಾಣ ತ್ಯಾಗಕ್ಕೂ ಸಿದ್ದರಾಗಿರಬೇಕು ಎಂದು ಕೊಲ್ಹಾಪುರ ಕನ್ನೇರಿಮಠದ ಅದೃಷ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ನಗರದ ಬಿವಿವಿ ಸಂಘದ ಇಂಜಿನಿಯರಿಂಗ್ ಕಾಲೇಜು ಸಭಾಭವನದಲ್ಲಿ ಬುಧವಾರ ಸಂಜೆ ಹಿಂದು ಜಾಗರಣ ವೇದಿಕೆ ಹಮ್ಮಿಕೊಂಡಿದ್ದ ಲವ್ ಜಿಹಾದ್ ವಿರುದ್ಧ ಜಾಗೃತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಪಾಲಕರು, ಶಿಕ್ಷಕರು, ಪೋಷಕರು ಶಾಲಾ, ಕಾಲೇಜಿಗೆ ಮಕ್ಕಳನ್ನು ಸೇರಿಸಿದರೇ ನಮ್ಮ ಕರ್ತವ್ಯ ಕೊನೆಗೊಳ್ಳುವದಿಲ್ಲ. ಅವರ ಮೇಲೆ ನಿಗಾ ವಹಿಸಬೇಕು. ದೇವರ ದರ್ಶನ, ಧರ್ಮ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮಾಡಬೇಕು. ನಮ್ಮ ಸುತ್ತಮುತ್ತಲೀನ ವಾತಾವರಣದ ಬಗ್ಗೆ ಗಮನ ಇರಬೇಕು. ಮಕ್ಕಳ ಸಹವರ್ತಿಗಳ ಯಾರು ಎನ್ನುವ ಪರಿಕಲ್ಪನೆ ನಮ್ಮಲ್ಲಿರಬೇಕು. ದಾರಿ ತಪ್ಪಿದಾಗ ನೇರವಾಗಿ ಎಚ್ಚರಿಸುವ ಕೆಲಸ ಮಾಡಬೇಕು ಎಂದರು ಸಲಹೆ ನೀಡಿದರು.
ಹೆಣ್ಣು, ಗಂಡು ಯಾವುದೇ ಇರಲಿ. ಲವ್ ಜಿಹಾದ್ ಬೂತಕ್ಕೆ ಬಲಿಯಾಗದಂತೆ ನೋಡಿಕೊಳ್ಳಬೇಕು. ಕೇರಳದಲ್ಲಿ ಇಂದು ಹಿಂದು ಕುಟುಂಬಗಳ ಪರಿಸ್ಥಿತಿ ಭಯಾನಕವಾಗಿದೆ. ಅವರ ಮಕ್ಕಳು ಅನ್ಯ ಧರ್ಮಕ್ಕೆ ಮತಾಂದರವಾಗಿದ್ದಾರೆ. ಇಷ್ಟಕ್ಕೂ ಅವರ‍್ಯಾರು ಸುಖವಾಗಿಲ್ಲ. ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ನಮ್ಮ ದೇಶದಿಂದ ಕರೆದೊಯ್ದದು ಇಸ್ಲಾಮಿಕ್ ರಾಷ್ಟ್ರಗಳಿಗೆ ಸೇರಿಸಲಾಗುತ್ತಿದೆ. ಇರಾನ್-ಇರಾಕ್ ಸೇರಿದಂತೆ ಇತರೆ ದೇಶಗಳಲ್ಲಿ ನಡೆದ ಯುದ್ಧದಲ್ಲಿ ಮೃತಪಟ್ಟವರು ನಮ್ಮ ದೇಶದ ಮತಾಂತರ ಮಕ್ಕಳು ಎನ್ನುವುದು ದುರಂತ ಸಂಗತಿ. ಈ ಪರಿಸ್ಥಿತಿಯ ಅವಲೋಕನ ಮಾಡದೇ ಹೋದರೆ ಭವಿಷ್ಯಕ್ಕೆ ಮಾರಕ ನಿಶ್ಚಿತ ಎಂದು ಹೇಳಿದರು.
ಶಿರೋಳದ ಸಿದ್ದರೂಢ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖಂಡರಾದ ಜಗದೀಶ ಕಾರಂತ, ಸಿ.ಎಸ್.ಪಾಟೀಲ ಸೇರಿದಂತೆ ಇತರರು ಇದ್ದರು.