ನಮೋಗೆ ಕರಿಕಂಬಳಿ ಹೊದಿಸಿ ಗೌರವಿಸಿ ಚರಂತಿಮಠ

bkt-29-13
ಬಾಗಲಕೋಟೆಯಲ್ಲಿ ಸೋಮವಾರ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಜಿ ಶಾಸಕ, ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಅವರು ಕರಿಕಂಬಳಿ ಹೊದಿಸಿ ಗೌರವಿಸಿದರು.
Published on

ಬಾಗಲಕೋಟೆ: ಬಾಗಲಕೋಟೆಗೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲರಿಗೂ ಕುತೂಹಲ ಮೂಡಿಸಿದ್ದು ಕಾರ್ಯಕ್ರಮದ ಮುಕ್ತಾಯದ ವರೆಗೂ ನಮೋ ಹೆಗಲಿಗೆ ಹಾಕಿದ್ದ ಕರಿಕಂಬಳಿಯನ್ನು ತೆಗೆಯಲೇ ಇಲ್ಲ.

ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಪ್ರಧಾನಿ ಮೋದಿ ಅವರಿಗೆ ನೆನಪಿನ ಕಾಣಿಕೆಯಾಗಿ ಬೆಳ್ಳಿಯ ರಾಜದಂಡವನ್ನು ನೀಡಿದರು. ಇದಕ್ಕೂ ಮೊದಲು ಶುಭ ಸಂಕೇತವಾಗಿ ಕರಿಕಂಬಳಿಯನ್ನು ಮೋದಿ ಅವರ ಹೆಗಲಿಗೆ ಹೊದಿಸಿ ಗೌರವಿಸಿದರು.

ಹೆಗಲಿಗೆ ಹಾಕಿಕೊಂಡ ಕರಿಕಂಬಳಿಯನ್ನು ಸನ್ಮಾನದ ಬಳಿಕ ಅದನ್ನು ತೆಗೆದುಕೊಳ್ಳಲು ಸಿಬ್ಬಂದಿ ಮುಂದಾದರಾದರೂ ಮೋದಿ ಅವರು ಬೇಡ ಎಂದು, ಕಂಬಳಿ ಹಾಕಿಕೊಂಡೇ ತಮ್ಮ ಇಡೀ ಭಾಷಣವನ್ನು ಮಾಡಿದರು. ೪೦ ನಿಮಿಷಕ್ಕೂ ಅಽಕ ಸಮಯದ ಭಾಷಣ ಮಾಡಿದ ಮೋದಿ ಅವರು ಅಷ್ಟೂ ಹೊತ್ತು ಕಂಬಳಿಯನ್ನು ಮಾತ್ರ ತೆಗೆಯದೇ ಭಾಷಣ ಮಾಡಿದರು.

ಮಾಜಿ ಶಾಸಕ, ಬಿವಿವಿ ಸಂಘದ ವೀರಣ್ಣ ಚರಂತಿಮಠ ಅವರು ವಿಶೇಷವಾಗಿ ಕಂಬಳಿ ಮತ್ತು ರಾಜದಂಡವನ್ನು ನೀಡುವ ಮೂಲಕ ಮೋದಿ ಅವರು ಮತ್ತೆ ದೇಶದ ಪ್ರಧಾನಿ ಆಗಲಿ ಎಂದು ಹಾರೈಸಿದ್ದಾರೆ. ಅದಕ್ಕೆ ತಕ್ಕಂತೆ ಮೋದಿ ಅವರು ಸಹ ಹಾರ, ಶಾಲು ತೆಗೆದರೂ ಕರಿಕಂಬಳಿ ಮಾತ್ರ ತೆಗೆಯದೇ ಹೆಗಲ ಮೇಲೆಯೇ ಹಾಕಿಕೊಂಡು ಭಾಷಣ ಮಾಡಿದ್ದು, ಸಾಕಷ್ಟು ಚರ್ಚೆಗೂ ಕಾರಣವಾಯಿತು.

ಇತ್ತೀಚಿಗೆ ನಾಮಪತ್ರ ಸಲ್ಲಿಕೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ ಅವರು ಕರಿಕಂಬಳಿ ಹಾಕಿಕೊಂಡು ನಾಮಪತ್ರ ಸಲ್ಲಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net