ನದಿಯ ಕಡೆ ಹೋಗದಂತೆ ಡಿಸಿ ಮನವಿ

bkt-29-1
Published on

ಬಾಗಲಕೋಟೆ: ಕೃಷ್ಣಾ ಮತ್ತು ಘಟಪ್ರಭಾ ನದಿ ಪಾತ್ರದಲ್ಲಿ ದಿನದಿಂದ ದಿನಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಪ್ರವಾಹ ಬೀತಿ ಮತ್ತಷ್ಟು ಹೆಚ್ಚಾಗುತ್ತಿದೆ. ಜಲಾಶಯದ ವ್ಯಾಪ್ತಿಗೆ ಬರುವ ನದಿ ದಡದ ಗ್ರಾಮಸ್ಥರು ತಮ್ಮ ಜಾನುವಾರುಗಳೊಂದಿಗೆ ನದಿಗೆ ಇಳಿಯದಂತೆ ಹಾಗೂ ಹಿನ್ನಿರಿನ ಕಡೆ ಹೋಗದಂತೆ ಮುನ್ನಚ್ಚರಿಕೆ ವಹಿಸಲು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಮನವಿ ಮಾಡಿಕೊಂಡಿದ್ದಾರೆ.

ನದಿಗಳಲ್ಲಿ ನೀರಿನ ಮಟ್ಟ ಅಪಾಯದ ಹಂತ ತಲುಪುತ್ತಿದೆ. ಆ ಹಿನ್ನಲೆಯಲ್ಲಿ ನದಿ ತೀರದ ಜನತೆ ನೀರಿನ ಸಮೀಪ ಹೋಗದಂತೆ ಎಚ್ಚರಿಕೆವಹಿಸಬೇಕು. ಜಾನುವಾರುಗಳ ವಿಷಯದಲ್ಲೂ ಮುಂಜಾಗ್ರತೆ ವಹಿಸಬೇಕು. ಈಗಾಗಲೇ ಮುಳುಗಡೆಯಾದ ಸೇತುವೆ ಕಡೆ ಜನ ಹೋಗದಂತೆ ಮುಂಜಾಗ್ರತವಾಗಿ ಎಚ್ಚರಿಕೆಯ ಸಂದೇಶದ ಬ್ಯಾನರ್ ಹಾಕಲಾಗಿದೆ. ಬಾದಿತ ಗ್ರಾಮಗಳಲ್ಲಿ ಡಂಗೂರ ಸಹ ಸಾರಲಾಗುತ್ತಿದೆ. ಆದಾಗ್ಯೂ ಸಹ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದಲ್ಲಿ ೬೫ ವರ್ಷದ ವೃದ್ದ ಹಾಗೂ ಕಡಕೋಳ ಗ್ರಾಮದಲ್ಲಿ ೫ ವರ್ಷದ ಬಾಲಕಿ ನೀರು ಪಾಲಾಗಿ ಜೀವ ಹಾನಿಯಾಗಿರುವ ಘಟನೆ ಸಂಭವಿಸಿದ್ದು, ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಮುನ್ನಚ್ಚರಿಕೆ ವಹಿಸಲು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net