

ಬಾಗಲಕೋಟೆ: ಬಾಗಲಕೋಟೆಯಲ್ಲಿ ಅದೇನಾಗಿದೆಯೋ ಏನೋ ಒಂದು ಕುರ್ಚಿಗಾಗಿ ಇಬ್ಬರು ಅಧಿಕಾರಿಗಳು ಕಿತ್ತಾಟ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಬಾಗಲಕೋಟೆ ಡಿಎಚ್‌ಒ ಹುದ್ದೆಗಾಗಿ ಇಬ್ಬರು ಅಽಕಾರಿಗಳು ನಡೆದಿದ್ದ ಕುರ್ಚಿ ಕಾದಾಟ ಮುಗಿಯಿತು ಎನ್ನುವಷ್ಟರಲ್ಲಿ ಈಗ ನಗರಸಭೆ ಆಯುಕ್ತರ ಕುರ್ಚಿ ಕಾದಾಟು ಶುರುವಾಗಿದೆ.
ಆರ್.ವಾಸಣ್ಣ ಹಾಗೂ ರಮೇಶ ಜಾಧವ ಎನ್ನುವವರು ಕುರ್ಚಿ ಕಾಳಗ ನಡೆಸಿದ್ದು, ಸೋಮವಾರ ಇಬ್ಬರೂ ಅಧಿಕಾರಿಗಳು ಕಚೇರಿಯಲ್ಲಿ ಇಬ್ಬರೂ ಕುಳಿತಿದ್ದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಬಾಗಲಕೋಟೆ ನಗರಸಭೆ ಆಯುಕ್ತರಾಗಿ ಆರ್.ವಾಸಣ್ಣ ಇದ್ದರು. ಹೊಸ ಸರ್ಕಾರ ಬಂದ ಬಳಿಕ ಆಗಸ್ಟ್ ತಿಂಗಳಲ್ಲಿ ವರ್ಗಾವಣೆ ಮಾಡಿತ್ತು. ತೆರವಾದ ಸ್ಥಳಕ್ಕೆ ರಮೇಶ ಜಾಧವ ಎನ್ನುವರನ್ನು ವಿಜಯಪುರದಿಂದ ವರ್ಗಾವಣೆ ಮಾಡಿತ್ತು.
ಸರ್ಕಾರದ ವರ್ಗಾವಣೆ ಪ್ರಶ್ನಿಸಿ ಆರ್.ವಾಸಣ್ಣ ಅವರು ಕೆಎಟಿಯಿಂದ ತಡೆಯಾಜ್ಞೆ ತಂದಿದ್ದಾರೆ. ನ್ಯಾಯಾಲಯದ ಆದೇಶದ ಮೇರಿಗೆ ತಾವು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೇಳುತ್ತಾರೆ. ಆದರೆ, ಸರ್ಕಾರ ತಮ್ಮನ್ನು ಇಲ್ಲಿಗೆ ವರ್ಗಾವಣೆ ಮಾಡಿದ್ದು, ಇದೀಗ ಅವರು ಸರ್ಕಾರದಿಂದ ಮರು ಆದೇಶ ತರಬೇಕು ಎನ್ನುವುದು ಜಾಧವ್ ಅವರ ವಾದವಾಗಿದೆ.
ಹೀಗಾಗಿ ಸೋಮವಾರ ಕಚೇರಿಯಲ್ಲಿ ಇಬ್ಬರು ಅಽಕಾರಿಗಳು ಕುಳಿತಿದ್ದು, ನಗರಸಭೆ ಸಿಬ್ಬಂದಿಗೆ ಇದು ಪೀಕಲಾಟ ತಂದಿಟ್ಟಿದೆ. ಯಾರ ಬಳಿ ಫೈಲ ಗಳನ್ನು ತೆಗೆದುಕೊಂಡು ಹೋಗುವುದು ಎಂದು ತೋಚದಂತಾಗಿದ್ದಾರೆ.