ನಗರದ ಅನಧಿಕೃತ ಜಾಹೀರಾತು ತೆರವು

02
Published on

ಬೆಳಗಾವಿ: ಮಹಾನಗರದಲ್ಲಿ ಬೇಕಾಬಿಟ್ಟಿ ಯಾಗಿ ಎಲ್ಲೆಂದರಲ್ಲಿ ಹಾಕಲಾಗಿದ್ದ ಅನಧಿಕೃತ ಜಾಹೀರಾತು ಹಾಗೂ ಬ್ಯಾನರ್‌ಗಳನ್ನು ಮಂಗಳವಾರ ಪಾಲಿಕೆ ಸಿಬ್ಬಂದಿ ತೆರವುಗೊಳಿಸಿದರು.

ನಗರದಲ್ಲ್ಲಿ ಬೇಕಾಬಿಟ್ಟಿಯಾಗಿ ಅನಧಿಕೃತ ವಾಗಿ ಜಾಹೀರಾತುಗಳನ್ನು ಹಾಕಲಾಗುತ್ತಿದೆ. ಇದರಿಂದ ಪಾಲಿಕೆಗೆ ಆದಾಯ ನಷ್ಟವಾಗುತ್ತಿದೆ ಎಂದು ನ.16ರಂದು ‘ವಿಜಯವಾಣಿ’ ದಿನಪತ್ರಿಕೆಯಲ್ಲಿ ‘ಅನಧಿಕೃತ ಜಾಹೀರಾತು ಆದಾಯ ನಷ್ಟ’ ಎಂಬ ವಿಶೇಷ ವರದಿ ಪ್ರಕಟಗೊಂಡಿತ್ತು.

ಇದರ ಬೆನ್ನಲ್ಲೆ ಎಚ್ಚೆತ್ತುಕೊಂಡ ಪಾಲಿಕೆ ಅಧಿಕಾರಿಗಳು ಮಂಗಳವಾರ ಏಕಕಾಲದಲ್ಲಿ ಅನಧಿಕೃತ ಜಾಹೀರಾತುಗಳ ನಾಮಫಲಕ, ಬ್ಯಾನರ್‌ಗಳನ್ನು ತೆರವುಗೊಳಿಸಿ ದ್ದಾರೆ. ಅಲ್ಲದೆ, ಬ್ಯಾನರ್‌ಗಳನ್ನು ಅಳವಡಿಸಿರುವ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದೆ. ಈಗಾಗಲೇ ಪಾಲಿಕೆ 180 ಕಡೆ ಅಳವಡಿಸಿರುವ ಅನಧಿಕೃತವಾಗಿ ಜಾಹೀರಾತು ನಾಮಫಲಕ ತೆರವುಗೊಳಿಸಲು ಸೂಚಿಸಲಾಗಿದೆ.

ಅಲ್ಲದೆ, ರಸ್ತೆ, ವೃತ್ತ, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ಗಳನ್ನು ಕಟ್ಟುತ್ತಿರುವ ಕಾರ್ಮಿಕರಿಗೆ ಎಚ್ಚರಿಕೆ ನೀಡಲಾಗಿದೆ. ಪಾಲಿಕೆ ಆದಾಯ ನಷ್ಟ ಉಂಟು ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಆಯುಕ್ತ ಶುಭ ಬಿ., ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net