

ಬಾಗಲಕೋಟೆ: ಆಧುನಿಕ ಬದುಕಿನ ಒತ್ತಡಗಳ ನಡುವೆ ಈಚೆಗೆ ನಾಟಕ, ಸಾಂಸ್ಕೃತಿಕ, ಮನರಂಜನೆ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಕ್ಷಣಿಸಿದೆ. ಆದರೇ ಇಲ್ಲೊಂದು ರಂಗ ತಂಡವು ಸಾವಿನಲ್ಲಿಯೂ ಆಸ್ತಿಗಾಗಿ ನಡೆಯುವ ಬದುಕಿನ ಆಟದ ಕಥಾ ಹಂದರ ಇಟ್ಟುಕೊಂಡು ಪ್ರದರ್ಶಿಸಿದ ಸಹಿ ರೀ ಸಹಿ ನಾಟಕ ಕೋಟನಗರಿ ಪ್ರೇಕ್ಷಕರನ್ನು ನಗುವಿನಲ್ಲಿ ತೇಲಾಡುವಂತೆ ಮಾಡಿತು..!!
ಕೋಟೆನಗರಿಯಲ್ಲಿ ಹೊಟೇಲ್ ಉದ್ಯಮದಲ್ಲಿ ತನ್ನದೆ ಛಾಪು ಮೂಡಿಸಿರುವ ಪಕ್ವಾನ್ ಹೊಟೇಲ್ ಸಮೂಹ ಸಂಸ್ಥೆಯು ಶುಕ್ರವಾರ ಸಂಜೆ ನವನಗರದ ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಸಹಿ ರೀ ಸಹಿ ನಾಟಕ ಮತ್ತೆ ಮತ್ತೆ ನೋಡಬೇಕು ಅನಿಸುವಂತೆ ಮಾಡಿತು. ಹಿರಿಯ ಕಲಾವಿದ ಯಶವಂತ ಸರದೇಶಪಾಂಡೆ ಅವರ ಅಭಿಯಾನಕ್ಕೆ ಮನ ಸೋಲುವಂತೆ ಮಾಡಿತು. ಮದನ್ ಸುಖಾತ್ಮೆ, ಹರಿ, ಗಲಗಲಿ, ರಂಗನ ಪಾತ್ರಗಳಲ್ಲಿ ಮಿಂಚಿದರು.
ಸರದೇಶಪಾಂಡೆ ಬೇರೆ, ಬೇರೆ ಪಾತ್ರಗಳಲ್ಲಿ ಬಂದಾಗಲೂ ಒಂದೇ ವ್ಯಕ್ತಿಯ ಅಭಿನಯ ಎಂಬುದು ಗೊತ್ತಾಗದಂತೆ ಪರಕಾಯ ಪ್ರವೇಶ ಮಾಡುತ್ತಾರೆ. ಗಲಗಲಿ ಪಾತ್ರದಲ್ಲಿ ತಮಗೆ ತಾವೆ ಮಾತನಾಡುಕೊಳ್ಳುವ ಗಲಗಲಿ ಬಂದ, ಗಲಗಲಿ ಕೂತ ಎನ್ನುವುದು, ರಂಗನ ಪಾತ್ರದಲ್ಲಿ ಯಾಕೆ, ಎಲ್ಲಿ, ಯಾವಾಗ ಎಂದು ಹಾಸಮಯ್ಯವಾಗಿ ಕೇಳುವುದು ಮನಸಿನಲ್ಲಿ ಅಚ್ಚಳಿಯದಂತೆ ಉಳಿಯುವಂತೆ ಮಾಡಿದೆ.
ಇನ್ನು ಹರಿ ಪಾತ್ರದಲ್ಲಿ ಅವರು ಬಂದಾಗ ಊಟ..ಊಟ..ಊಟ ಎನ್ನುವುದು ಅಪ್ಪಿತಪ್ಪಿ ಅವರ ಭುಜ ತಟ್ಟಿದರೆ ನೀವು ದೇವರಂಥ ಮನುಷ್ಯ ಎಂದು ಬಣ್ಣಿಸುವುದು, ತೊಡೆಗೆ ಸ್ಪರ್ಶಿಸಿದರೆ ನಿಮ್ಮಪ್ಪಂದ ತಿಂದ್ದಿನೇನು ಎಂದು ಪ್ರಶ್ನಿಸುವುದು ಜನರ ನಗೆ ಗಡಲಲಿ ತೇಲಿಸಿದರೆ, ಮದನ ಸುಖಾತ್ಮೆ ಪಾತ್ರ ಅವರ ಪ್ರಬುದ್ಧ ನಟನೆಗೆ ಹಿಡಿದ ಕನ್ನಡಿ.
ನಾಟಕ ಜೀವಾಳು ಆಗಿದ್ದ ಯಶವಂತ ಸರದೇಶಪಾಂಡೆ ಎನರ್ಜಿ ನಾಟಕದಾದ್ಯಂತ ಕಡಿಮೆಯಾಗಲಿಲ್ಲ. ಇನ್ನುಳಿದಂತೆ ನಾಟಕದಲ್ಲಿ ರವಿ ಕುಲಕರ್ಣಿ, ರಾಜೇಶ್ವರಿ ದೇಶಪಾಂಡೆ, ಪ್ರಿಯಾ ಕುಲಕರ್ಣಿ, ಅರವಿಂದ ಪಾಟೀಲ, ಕೃಷ್ಣ ಮೂರ್ತಿ ಗಾಂವಕರ, ಶಿಲ್ಪಾ ಮೊಕಾಶಿ ಪಾಂಡೆ, ಶೇಖರ ಪಾಟೀಲ, ನಾಗರಾಜ ಪಾಟೀಲ ಪಾತ್ರ ಮಾಡಿದರು. ಜೀವನ ಫರ್ನಾಂಡಿಸ್, ಐಶ್ವರ್ಯ ತಾಂಬೆ ಅವರು ತಾಂತ್ರಿಕ ನೆರವು ನೀಡಿದರೆ, ಶ್ರೀಕಾಂತ ಕುಲಕರ್ಣಿ ಮೇಕಪ್ ಹೊಣೆ ಹೊತ್ತಿದ್ದರು.
ಜಿಲ್ಲಾಽಕಾರಿ ಕೆ.ಎಂ.ಜಾನಕಿ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ಎಡಿಸಿ ಪರಶುರಾಮ ಶಿನ್ನಾಳಕರ, ಜಿಪಂ ಉಪಕಾರ್ಯದರ್ಶಿ ಅಮರೇಶ ನಾಯಕ, ಎನ್‌ಐಸಿ ಅಽಕಾರಿ ಗಿರಿಯಾಚಾರ್, ಕಾರ್ಯಕ್ರಮ ಸಂಘಟಕರಾದ ಪವನ ಸೀಮಿಕೇರಿ, ಪ್ರವೀಣ ಮೆಳ್ಳಿಗೇರಿ ಇತರರು ಇದ್ದರು.