ನಕಲಿ ಲಡ್ಡು ಮುತ್ಯಾನ ರೀಲ್ಸ್ ಗಳು ಭಾರಿ ಸದ್ದು!

bkt-03-11 (1)
ಅಂಗವಿಕಲ ವ್ಯಕ್ತಿಯೊಬ್ಬನನ್ನು ಖುಚಿ ಮೇಲೆ ಕೂಡಿಸಿ ಅದನ್ನು ಎತ್ತಿಕೊಂಡು ತಿರುಗುವ ಪ್ಯಾನ್ ನಿಲ್ಲಿಸುವ ದೃಶ್ಯ. ಇದು ಲಡ್ಡು ಮುತ್ಯಾನ ಅವತಾರ ಈ ಸಂಚಾರಿ ದೇವರು ಎಂದು ರೀಲ್ಸ್ ಹಾಕಿರುವುದು.
Published on

ಅಶೋಕ ಶೆಟ್ಟರ, ಬಾಗಲಕೋಟೆ: ಉತ್ತರ ಕರ್ನಾಟಕದಲ್ಲಿ ಅಪಾರ ಭಕ್ತ ಸಮೂಹ ಹೊಂದಿರುವ ಲಡ್ಡು ಮುತ್ಯಾನ ಹೆಸರಿನಲ್ಲಿನ ನಕಲಿ ವ್ಯಕ್ತಿಯ ರೀಲ್ಸ್ ಗಳು ಇದೀಗ ಜಿಲ್ಲೆ, ರಾಜ್ಯ ಮಾತ್ರವಲ್ಲದೇ ದೇಶ-ವಿದೇಶಗಳಲ್ಲೂ ಭಾರಿ ಸದ್ದು ಮಾಡಲಾರಂಭಿಸಿವೆ.

ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿ ರೀತಿಯಲ್ಲಿ ಭಕ್ತರ ಹಣೆಗೆ ಹಚ್ಚುವ ನಕಲಿ ಲಡ್ಡು ಮುತ್ಯಾನ ರೀಲ್ಸ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಮಾಣದಲ್ಲಿ ವೈರಲ್ ಆಗಿವೆ.

ವಿಕಲಚೇತನ ವ್ಯಕ್ತಿಯೊಬ್ಬ ಮಾಡಿರುವ ಈ ರೀಲ್ಸ್ ಬಗ್ಗೆಯೇ ಎಲ್ಲ ಕಡೆಗೂ ವ್ಯಾಪಕ ಚರ್ಚೆ ಆಗುತ್ತಿದ್ದು, ಈ ಬಗ್ಗೆ ಹತ್ತು ಹಲವು ಅನುಮಾನಗಳನ್ನು ಹುಟ್ಟಿಹಾಕಿವೆ. ಜೊತೆಗೆ ಮೂಲ ಪವಾಡ ಪುರುಷ ಲಡ್ಡು ಮುತ್ಯಾನ ಅಪಾರ ಭಕ್ತರು ಈ ನಕಲಿ ಮುತ್ಯಾನ ರೀಲ್ಸ್ಗಳ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಬಾಗಲಕೋಟೆಯ ಮವಾಡ ಪುರುಷ ಲಿಂಗೈಕ್ಯ ಲಡ್ಡು ಮುತ್ಯಾ ಬರೀ ಜಿಲ್ಲೆಯಲ್ಲಿ ಮಾತ್ರವಲ್ಲದೇ ಇಡೀ ಉತ್ತರ ಕರ್ನಾಟಕದ ಮನೆ ಮನಗಳಲ್ಲಿ ನೆಲೆಸಿದ್ದಾರೆ. ಅಪಾರ ಭಕ್ತ ಸಮೂಹ ಇದೆ. ಬಾಗಲಕೋಟೆ ತಾಲೂಕಿನ ಸೀಮಿಕೇರಿಯಲ್ಲಿ ಲಡ್ಡು ಮುತ್ಯಾನ ನೈಜ ಮಠವಿದೆ. ಮುತ್ಯಾ ಅವರು ೧೯೯೩ರ ಆಗಸ್ಟ್ ೨ ರಂದು ಲಿಂಗೈಕ್ಯರಾಗಿದ್ದಾರೆ. ಲಡ್ಡು ಮುತ್ಯಾ ತಲೆ, ಮೈಗೆ ಗೋಣಿ ಚೀಲದ ತಟ್ಟನ್ನು ಸುತ್ತಿಕೊಳ್ಳುತ್ತಿದ್ದರು. ಲಡ್ಡು ಮುತ್ಯಾ ಅವರು ಮೂಲ ಹೆಸರು ಮಲ್ಲಯ್ಯ ಎಂದು. ೧೯೭೦ ರಿಂದ ೧೯೯೦ರ ಅವಽಯಲ್ಲಿ ಬಾಗಲಕೋಟೆ, ವಿಜಯಪುರ ಸೇರಿದಂತೆ ಉತ್ತರ ಕರ್ನಾಟಕದ ಜನರು ಇವರನನು ಪವಾಡ ಪುರುಷ ಲಡ್ಡು ಮುತ್ಯಾ ಎಂದು ಗೌರವಿಸಿ ಪೂಜಿಸುತ್ತಿದ್ದರು. ಇವರು ಮದುವೆಯಾದ ಬಳಿಕ ಪತ್ನಿಯನ್ನು ತ್ಯೇಜಿಸಿ ವಿರಾಗಿಯಾಗಿ ಜೀವನ ಸಾಗಿಸುತ್ತಿದ್ದರು. ಲಡ್ಡು ಮುತ್ಯಾ ಆಡಿದ ಮಾತುಗಳು ನಿಜವಾಗುತ್ತಿದ್ದವು, ಅವರು ಯಾವುದೇ ಅಂಗಡಿಗಳಿಗೆ ಹೋದರೂ ಆ ಅಂಗಡಿಯವರಿಗೆ ಹೆಚ್ಚಿನ ಲಾಭ ಆಗುತ್ತಿತ್ತು. ಅವರು ಕಾಲಿಡುವ ಮನೆಗೆ ಅದೃಷ್ಟ ಒಲಿದು ಬರುತ್ತದೆ ಎನ್ನುವ ನಂಬಿಕೆಯ ಭಕ್ತ ಸಮೂಹದಲ್ಲಿ ಇತ್ತು. ಹೀಗಾಗಿ ಲಡ್ಡು ಮುತ್ಯಾನ ಬಗ್ಗೆ ಈ ಭಾಗದಲ್ಲಿ ಅಪಾರ ಶ್ರದ್ಧೆ, ಭಕ್ತಿ ಮನೆ ಮಾಡಿದ್ದು, ಇವತ್ತಿಗೂ ಸಹ ಅಮವಾಸ್ಯ, ಹುಣ್ಣಿಮೆಯ ದಿನ ಅಪಾರ ಭಕ್ತರು ಲಡ್ಡು ಮುತ್ಯಾನ ಗದ್ದುಗೆಗೆ ಪೂಜೆ ಸಲ್ಲಿಸಲು ಬರುತ್ತಾರೆ.

ಇದೀಗ ನಕಲಿ ಲಡ್ಡು ಮುತ್ಯಾನ ರೀಲ್ಸ್
ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ಸ್ ಆಗುತ್ತಿವೆ. ಅಂಗವಿಕಲನಾಗಿರುವ ವ್ಯಕ್ತಿಯೊಬ್ಬ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳು ತೆಗೆದು ವಿಭೂತಿ ಎಂದು ಹಚ್ಚಿತ್ತಿರುವ ದೃಶ್ಯ ವೈರಲ್ ಆಗಿದೆ. ಇದೇ ತೆರನಾಗಿ ಮಕ್ಕಳು, ಹಿರಿಯರು, ಯುವಕರು ಸಹ ಅದೇ ರೀತಿ ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಿದ್ದಾರೆ. ಈ ವಿಡಿಯೋಗಳು ಟ್ರೋಲ್ ಕೂಡ ಆಗುತ್ತಿವೆ. ಲಡ್ಡು ಮತ್ಯಾನ ಈ ಅನುಕರಣೆ ಅಪಾಯಕ್ಕೆ ಆವ್ಹಾನ ನೀಡುವಂತಿದ್ದು, ನಕಲಿ ಲಡ್ಡು ಮುತ್ಯಾನ ಈ ರೀಲ್ಸ್ ಮೂಲ ಲಡ್ಡು ಮುತ್ಯಾನ ಭಕ್ತರು ಆಕ್ರೋಶಗೊಂಡಿದ್ದಾರೆ.

ಲಡ್ಡು ಮುತ್ಯಾನ ಅವತಾರ ಈ ಸಂಚಾರಿ ದೇವರ ಎಂಬ ಹಾಡಿನೊಂದಿಗೆ ಅಂಗವಿಕಲ ವ್ಯಕ್ತಿಯ ರೀಲ್ಸ್ ಮಾಡಿ ಅನೇಕ ಫೆಮಸ್ ಆಗುತ್ತಿದ್ದಾರೆ. ಇಬ್ಬರು ವ್ಯಕ್ತಿಗಳು ಚೇರ್‌ನಲ್ಲಿ ನಕಲಿ ಲಡ್ಡು ಮುತ್ಯಾನ ಎತ್ತಿ ಹಿಡಿದರೆ, ಆಗ ನಕಲಿ ಲಡ್ಡು ಮುತ್ಯಾ ತಿರುಗುವ ಫ್ಯಾನ್ ನಿಲ್ಲಿಸಿ ಅದರ ಧೂಳನ್ನು ವಿಭೂತಿಯಂತೆ ಹಚ್ಚುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಇದು ಬರೀ ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ದೇಶ, ವಿದೇಶಗಳಲ್ಲಿ ಸೌಂಡ್ ಮಾಡತೊಡಗಿವೆ.
ಸಾಮಾಜಿಕ ಜಾಲತಾಣದಲ್ಲಿ ನಕಲಿ ಲಡ್ಡು ಮುತ್ಯಾನ ಹೆಸರಿನಲ್ಲಿ ರೀಲ್ಸ್ಗಳು ಬರುತ್ತಿರುವುದು ಗಮನಕ್ಕೆ ಬಂದಿದೆ. ಈ ಬಗ್ಗೆ ನಮ್ಮ ಸೋಷಿಯಲ್ ಮಿಡಿಯಾ ಕೇಂದ್ರ ಅದನ್ನು ಪರಿಶೀಲಿಸುತ್ತಿದೆ. ರೀಲ್ಸ್ ಗಳಲ್ಲಿ ಕಂಡಂತೆ ಇದರಿಂದ ಯಾರಿಗಾದರೂ ತೊಂದರೆ ಆಗಿದ್ದರೆ, ಜನರಿಂದ ದುಡ್ಡು ವಸೂಲಿ ಮಾಡಿದ್ದರೆ, ಮತ್ತೊಬ್ಬರ ನಂಬಿಕೆ ದುರುಪಯೋಗ ಪಡಿಸಿಕೊಳ್ಳುವುದು ಗಮನಕ್ಕೆ ಬಂದರೆ ಹಾಗೂ ಈ ಬಗ್ಗೆ ಯಾರಾದರೂ ದೂರು ಕೊಟ್ಟರೆ, ಈ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್ಪಿ ಅಮರನಾಥ ರೆಡ್ಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net