ನಕಲಿ ದಾಖಲೆ ಸೃಷ್ಟಿ: ಗ್ರಾಪಂ ಅಧ್ಯಕ್ಷೆ, ಪಿಡಿಒಗೆ ಜೈಲು ಶಿಕ್ಷೆ

court
Published on

ಕಲಬುರಗಿ: ಇಂದಿರಾ ಆವಾಸ ಯೋಜನೆಯಡಿ ಮಂಜೂರಾದ ಮನೆಗಳನ್ನು ನಿರ್ಮಿಸದೆ ನಕಲಿ ಕಾಗದ ಸೃಷ್ಟಿಸಿ, ಸರ್ಕಾರಕ್ಕೆ ವಂಚಿಸಿದ ಅಪರಾಧಿ ಗ್ರಾಪಂ ಅಭಿವೃದ್ಧಿ ಅಧಿಕಾರಿಗೆ ಚಿಂಚೋಳಿ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ, ೯೦ ಸಾವಿರ ರೂ. ದಂಡ ವಿಧಿಸಿ, ಆದೇಶಿಸಿದೆ. ಚಿಂಚೋಳಿ ತಾಲೂಕಿನ ಚೆಂಗಟಾ ಗ್ರಾಮ ಪಂಚಾಯಿತಿಗೆ ೨೦೦೯-೧೦ನೇ ಸಾಲಿನಲ್ಲಿ ಇಂದಿರಾ ಆವಾಸ ಯೋಜನೆ ಅಡಿ ಮನೆಗಳು ಮಂಜೂರಾಗಿದ್ದವು. ಪಂಚಾಯಿತಿ ಅಧ್ಯP್ಷÀ, ಪಿಡಿಒ ಹಾಗೂ ಸದಸ್ಯರು ಸೇರಿ ಮನೆಗಳನ್ನು ನಿರ್ಮಿಸದೆ, ಸರ್ಕಾರಕ್ಕೆ ವಂಚಿಸಿರುವುದು ಸಾಬೀತು ಆಗಿದೆ. ರಟಕಲï ಪೊಲೀಸ್ ಠಾಣೆಯ ಪಿಎಸ್‌ಐ ಅಕ್ಕಮಹಾದೇವಿ ಪ್ರಕರಣದ ತನಿಖೆ ನಡೆಸಿ, ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಾದವಿವಾದ ಆಲಿಸಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ದತ್ತಕುಮಾರ ಅವರು, ಗ್ರಾಪಂ ಅಧ್ಯಕ್ಷೆ ಜ್ಯೋತಿ ರಾಠೋಡ್‌ಗೆ ಆರು ತಿಂಗಳು ಸಾದಾ ಜೈಲು, ೫೦ ಸಾವಿರ ರೂ. ದಂಡ, ಬಾಬು ಪೋಮು ಅವರಿಗೆ ೬ ತಿಂಗಳ ಜೈಲು ಶಿಕ್ಷೆ, ೪೦ ಸಾವಿರ ರೂ. ದಂಡ, ಪಿಡಿಒ ಅಶೋಕ ಚನ್ನಪ್ಪಗೆ ಒಂದು ವರ್ಷ ಜೈಲು ಶಿಕ್ಷೆ, ೯೦ ಸಾವಿರ ರೂ. ದಂಡ, ಪಂಚಾಯಿತಿ ಸದಸ್ಯರಾದ ಖ್ಯಾದಮ್ಮ ಶಂಕ್ರೆಪ್ಪ ಮತ್ತು ಸುವರ್ಣಾ ಅಂಬರಾಯ ಅವರಿಗೆ ತಲಾ ಐದು ಸಾವಿರ ರೂ. ದಂಡ ತೀರ್ಪು ಹೊರಡಿಸಿz್ದÁರೆ. ಸರ್ಕಾರದ ಪರ ಸಹಾಯಕ ಅಭಿಯೋಜಕ ಶಾಂತಕುಮಾರ ಜಿ.ಪಾಟೀಲ ವಾದಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net