

ನಂಜನಗೂಡು: ಹೋಳಿ ಹುಣ್ಣಿಮೆ ಹಿನ್ನೆಲೆ ಶುಕ್ರವಾರ ಸಾವಿರಾರು ಭಕ್ತರು ಆಗಮಿಸಿ ಶ್ರೀ ನಂಜುಂಡೇಶ್ವರ ಸ್ವಾಮಿ ದರ್ಶನ ಪಡೆದರು.
ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದರು. ಸರತಿ ಸಾಲಿನಲ್ಲಿ ನಿಲ್ಲಲಾಗದ ಭಕ್ತರು ದೇವಾಲಯದ ಹೊರ ಭಾಗದಲ್ಲಿ ಪೂಜೆ ಪುನಸ್ಕಾರ ನೆರವೇರಿಸುತ್ತಿರುವ ದೃಶ್ಯ ಕಂಡು ಬಂದಿತ್ತು. ಬೆಳಗಿನ ಜಾವದಿಂದಲೇ ನಂಜುಂಡೇಶ್ವರನಿಗೆ ಮಹಾ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆ ನಡೆದವು. ಭಕ್ತರು ಧೂಪ ಸೇವೆ, ಉರುಳು ಸೇವೆ, ಆರತಿ ಸೇವೆ ಮಾಡುವ ಮೂಲಕ ತಮ್ಮ ಮನದ ಹರಕೆಗಳನ್ನು ಸಲ್ಲಿಸಿದರು.